ಮಂಜೇಶ್ವರ: ಶಾಲಾ ಮಿತ್ರ ಮಂಡಳಿ ಗ್ರಂಥಾಲಯ ಮತ್ತು ವಾಚನಾಲಯ ಹಾಗೂ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಸಂಯುಕ್ತ ಆಶ್ರಯದಲ್ಲಿ ದಿ.ಎಸ್. ನಾರಾಯಣ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಬಾಯಾರು ಹೆದ್ದಾರಿ ಶಾಲಾ ಸಭಾಂಗಣದಲ್ಲಿ ಭಾನುವಾರ ಜರಗಿತು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಶ್ರೀರಾಮ ಪದಕಣ್ಣಾಯ ಅವರು ಸಂಸ್ಮರಣಾ ಭಾಷಣಗೈದರು. ಶ್ರೀ ರಾಮಕೃಷ್ಣ ಭಟ್ ಪೆಲತ್ತಡ್ಕ, ಗ್ರಂಥಾಲಯದ ಉಪಾಧ್ಯಕ್ಷ ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ನ ಸದಸ್ಯ ದಾಸಪ್ಪ ಶೆಟ್ಟಿ, ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ, ಹೆದ್ದಾರಿ ಶಾಲಾ ಪ್ರಬಂಧಕ ರಾಜೇಶ್ ಎನ್ ಅವರು ಎಸ್. ನಾರಾಯಣ ಭಟ್ ಅವರನ್ನು ಸ್ಮರಣಗೈದು ಮಾತನಾಡಿದರು. ಗ್ರಂಥಾಲಯದ ಅಧ್ಯಕ್ಷ ಆದಿನಾರಾಯಣ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.

.jpg)
