ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ, ಉಪ್ಪಳ ಸೋಂಕಾಳ್ ಪ್ರತಾಪನಗರ ನಿವಾಸಿ ನವೀನ್(53)ಎಂಬವರು ಮೃತಪಟ್ಟಿದ್ದಾರೆ. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸನಿಹ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಕೆಲಸ ಮುಗಿಸಿ ಶನಿವಾರ ರಾತ್ರಿ ನವೀನ್ ತಮ್ಮ ಸ್ಕೂಟರಲ್ಲಿ ಮನೆಗೆ ತೆರಳುವ ಮಧ್ಯೆ ಎದುರಿಂದ ಆಗಮಿಸಿದ ಕಾರು ಪಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

