ಕಾಸರಗೋಡು: ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೆ ಕಾಸರಗೋಡು ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಕಾಸರಗೋಡು-ಕಣ್ಣೂರು ಕ್ರೈಂ ಬ್ರಾಂಚ್ ಎಸ್.ಪಿ ಪಿ. ಬಾಲಕೃಷ್ಣನ್ ನಾಯರ್ ಹಾಗೂ ಕೋಯಿಕ್ಕೋಡ್ ಗ್ರಾಮಾಂತರ ಕ್ರೈಂಬ್ರಾಂಚ್ ಡಿವೈಎಸ್‍ಪಿ ಯು. ಪ್ರೇಮನ್ ರಾಷ್ಟ್ರಪತಿ ಪದಕಕ್ಕೆ ಅರ್ಹತೆ ಪಡೆದುಕೊಂಡವರು. ಪಿ. ಬಾಲಕೃಷ್ಣನ್ ಅವರು ಬೇಕಲ ಪಾಲಕುನ್ನು ನಿವಾಸಿ ಹಾಗೂ ಯು. ಪ್ರೇಮನ್ ಅವರು ಕಾಞಂಗಾಡು ಚೆಮ್ಮಟ್ಟಂವಯಲ್ ನಿವಾಸಿಯಾಗಿದ್ದಾರೆ. ಪಿ. ಬಾಲಕೃಷ್ಣನ್ ನಾಯರ್ ಅವರು ಕಾಸರಗೋಡಿನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ 2924ರಿಂದ ಹೆಚ್ಚಷುವರಿ ಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಧ್ಯೆ ಕಾಸರಗೋಡು-ಕಣ್ಣೂರು ಜಿಲ್ಲಾ ಕ್ರೈಂ ಬ್ರಾಂಚ್ ಎಸ್.ಪಿಯಾಗಿ ಬಡ್ತಿ ಪಡೆದುಕೊಂಡಿದ್ದರು.
ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ಪೆÇಲೀಸಾ ಇಲಾಖೆಯ ಅತ್ಯುತ್ತಮ ಸೇವೆ ಪರಿಗಣಿಸಿ ನೀಡಲಾಗುವ ರಾಷ್ಟ್ರಪತಿಗಳ ಪೆÇೀಲೀಸ್ ಪದಕ ಪ್ರಶಸ್ತಿಗೆ ಕೇರಳದಿಂದ 11ಮಂದಿ ಪೆÇಲೀಸ್ ಅಧಿಕಾರಿಗಳು ಅರ್ಹರಾಗಿದ್ದಾರೆ.
ಪಿ. ಬಾಲಕೃಷ್ಣನ್ ನಾಯರ್


