ಬದಿಯಡ್ಕ: ಉದಯಗಿರಿ ಶ್ರೀ ಶಂಕರನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಖ್ಯ ಶಿಕ್ಷಕ ಶ್ರೀಧರ ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವರಣೆ ನೀಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೀತಾ ಮಾಲಿನಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್, ಭಗತ್ ಸಿಂಗ್ ಕ್ಲಬ್ ಅಧ್ಯಕ್ಷ ಸತ್ಯಪ್ರಕಾಶ್, ಅಂಗನವಾಡಿ ಶಿಕ್ಷಕಿ ಚಿತ್ರಲೇಖ ಶುಭಾಶಂಸನೆಗೈದರು. ಶಿಕ್ಷಕ ಶಿವರಾಮ ಸ್ವಾಗತಿಸಿ, ನವೀನ್ ಕುಮಾರ್ ವಂದಿಸಿದರು, ಮಕ್ಕಳಿಂದ ಭಾಷಣ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆದವು.

.jpg)
.jpg)
