ಬದಿಯಡ್ಕ: ಕಾಡುಪ್ರಾಣಿಗಳ ದಾಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಆ.15 ರಂದು ವೆಳ್ಳರಿಕುಂಡಲ್ಲಿ ಆರಂಭವಾದ ಅನಿರ್ದಿಷ್ಟಾವಧಿ ರೈತ ಸ್ವರಾಜ್ ಸತ್ಯಾಗ್ರಹವನ್ನು ಬೆಂಬಲಿಸಿ ಕಿಸಾನ್ ಸೇನಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಬದಿಯಡ್ಕ ಬಸ್ ನಿಲ್ದಾಣದ ಬಳಿ ಐಕ್ಯತಾ ಸತ್ಯಾಗ್ರಹ ಸಭೆ ನಡೆಯಿತು.
ಕಿಸಾನ್ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಕೂರ್ ಕೇನಾಜೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಶಾಜಿ ಕಾಡಮನೆ ಅಧ್ಯಕ್ಷತೆ ವಹಿಸಿದ್ದರು. ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಗೆ, ಸುರೇಶ್ ಕಕ್ಕೆಪ್ಪಾಡಿ, ಸುಬ್ರಹ್ಮಣ್ಯ ಭಟ್, ಸಿರಾಜುದ್ದೀನ್ ಕಣ್ಣೂರು, ಸುರೇಶ್ ಮನಬೈಲು, ಮುಸ್ತಫಾ ಕಾಡಮನೆ, ಪ್ರಸಾದ್ ಕಕ್ಕೆಪ್ಪಾಡಿ, ಗಿರೀಶ್ ಭಟ್ ಮಾತನಾಡಿದರು. ಅಬ್ದುಲ್ಲ ಕಂಡತ್ತಿಲ್ ಸ್ವಾಗತಿಸಿ, ಸುಧೀಂದ್ರ ಸಿ. ವಂದಿಸಿದರು.

.jpg)
