ತಿರುವನಂತಪುರಂ: ಕುಟುಂಬಶ್ರೀ ಉತ್ಪನ್ನಗಳು ಮತ್ತು ಸೇವೆಗಳನ್ನು ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ಮಾಡಲು ಅಭಿವೃದ್ಧಿಪಡಿಸಲಾದ ಇ-ಕಾಮರ್ಸ್ ಮೊಬೈಲ್ ಅಪ್ಲಿಕೇಶನ್ ಪಾಕೆಟ್ ಮಾರ್ಟ್, ಕುಟುಂಬಶ್ರೀ ಸ್ಟೋರ್ ವ್ಯವಸ್ಥೆಯ ಮೂಲಕ ನಾಳೆಯಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಕುಟುಂಬಶ್ರೀಯ ಸುಮಾರು 2,000 ಉತ್ಪನ್ನಗಳು ಪಾಕೆಟ್ ಮಾರ್ಟ್‍ನಲ್ಲಿ ಲಭ್ಯವಿರುತ್ತವೆ. ಇದರ ಜೊತೆಗೆ, ಓಣಂ ಸಮಯದಲ್ಲಿ ಕುಟುಂಬಶ್ರೀ ಉತ್ಪನ್ನಗಳನ್ನು ಹೊಂದಿರುವ ಗಿಫ್ಟ್ ಹ್ಯಾಂಪರ್ ಅನ್ನು ಪಾಕೆಟ್ ಮಾರ್ಟ್ ಆಪ್ ಮೂಲಕ ಆರ್ಡರ್ ಮಾಡಿ ಖರೀದಿಸಬಹುದು.
ಪಾಕೆಟ್ ಮಾರ್ಟ್ ಮೂಲಕ 5000 ಗಿಫ್ಟ್ ಪ್ಯಾಕೇಜ್‍ಗಳನ್ನು ವಿತರಿಸುವ ಗುರಿ ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ರೀತಿಯ ಪಾಯಸ ಫ್ಯಾಕೆಟ್ ಸೇರಿದಂತೆ ಕುಟುಂಬಶ್ರೀಯ ಗಿಫ್ಟ್ ಹ್ಯಾಂಪರ್ ಅನ್ನು ಓಣಂಗೆ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು.
ಪಾಕೆಟ್ ಮಾರ್ಟ್ ಅಪ್ಲಿಕೇಶನ್ ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ. ಕುಟುಂಬಶ್ರೀ ಉತ್ಪನ್ನಗಳನ್ನು ಭಾರತದ ಎಲ್ಲಿಂದಲಾದರೂ ಆರ್ಡರ್ ಮಾಡಬಹುದು. ಕುಟುಂಬಶ್ರೀ ಆಹಾರವನ್ನು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಲು ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗಿದೆ.
ಉಪ್ಪಿನಕಾಯಿ (250 ಗ್ರಾಂ), ಸಕ್ಕರೆ ಬೆರಟ್ಟಿ(250 ಗ್ರಾಂ), ಪಾಯಸ ಫ್ಯಾಕೆಟ್-ಶ್ಯಾವಿಗೆ (250 ಗ್ರಾಂ), ಅಡೆ (250 ಗ್ರಾಂ), ಸಾಂಬಾರ್ ಮಸಾಲ (100 ಗ್ರಾಂ), ಮೆಣಸಿನ ಪುಡಿ (250 ಗ್ರಾಂ), ಕೊತ್ತಂಬರಿ ಪುಡಿ (250 ಗ್ರಾಂ), ಅರಿಶಿನ ಪುಡಿ (100 ಗ್ರಾಂ), ಮತ್ತು ತರಕಾರಿ ಮಸಾಲ ಪುಡಿ (100 ಗ್ರಾಂ) ಸೇರಿದಂತೆ ಒಂಬತ್ತು ವಸ್ತುಗಳನ್ನು ಒಳಗೊಂಡಿರುವ ಈ ಗಿಫ್ಟ್ ಹ್ಯಾಂಪರ್ ಬೆಲೆ ರೂ. 799 ಮತ್ತು ಕೊರಿಯರ್ ಶುಲ್ಕಗಳು ಸೇರಿವೆ.
ಪಾರ್ಸೆಲ್ ಜೊತೆಗೆ ಪೋಟೋ ಮತ್ತು ಶುಭಾಶಯಗಳೊಂದಿಗೆ ಕಸ್ಟಮೈಸ್ ಮಾಡಿದ ಶುಭಾಶಯ ಪತ್ರವನ್ನು ಸಹ ಒದಗಿಸಲಾಗುತ್ತದೆ. ಓಣಕ್ಕಿಟ್ ಸಿಡಿಎಸ್ ಮೂಲಕವೂ ಬುಕಿಂಗ್ ಮಾಡಬಹುದು.

