ಕೊಯಮತ್ತೂರು: ತಮಿಳುನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳ ವಿವಿಧ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ಹೆಚ್ಚುವರಿ ನೀರನ್ನು ಭವಾನಿ ನದಿಗೆ ಬಿಡಲಾಗುವುದೆಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಭವಾನಿ ನದಿಯ ಸುತ್ತಾಮುತ್ತಲಿನ ಸತ್ಯಮಂಗಲಂ, ಗೋಬಿಚೆಟ್ಟಿಪಾಳ್ಯಂ ಗ್ರಾಮದ ಜನರಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ತಾಣಗಳಲ್ಲಿ ನೆಲೆಸಲು ಈಗಾಗಲೇ ಸೂಚಿಸಲಾಗಿದೆ.
ಅಣೆಕಟ್ಟುಗೆ 6,937 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆ ಸಮಯದಲ್ಲಿ ನೀರಿನ ಮಟ್ಟ 101.71 ಅಡಿ ಹಾಗೂ ಸಂಗ್ರಹ 30.08 ಟಿಎಂಸಿ ಇತ್ತು. ನೀರಿನ ಒಳಹರಿವು ಮತ್ತು ಸಂಗ್ರಹದಲ್ಲಿ ತಕ್ಷಣದ ಹೆಚ್ಚಳ ಸಂಭವಿಸಬಹುದು,
ಸತ್ಯಮಂಗಲಂ ಮತ್ತು ಗೋಬಿಚೆಟ್ಟಿಪಾಳ್ಯಂ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ 1,500 ಕ್ಯೂಸೆಕ್‌ಗಳನ್ನು ಎಲ್‌ಬಿಪಿ ಕಾಲುವೆಗೆ, 800 ಕ್ಯೂಸೆಕ್‌ಗಳನ್ನು ತಡಪಲ್ಲಿ ಮತ್ತು ಅರಕ್ಕನ್‌ಕೊಟ್ಟೈ ಕಾಲುವೆಗಳಿಗೆ, 400 ಕ್ಯೂಸೆಕ್‌ಗಳನ್ನು ಕಾಳಿಂಗರಾಯನ್ ಕಾಲುವೆಗೆ ಮತ್ತು 100 ಕ್ಯೂಸೆಕ್‌ಗಳನ್ನು ಭವಾನಿ ನದಿಗೆ ಬಿಡಲಾಗಿದೆ.

