ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ತೂಮಿನಾಡು ಹಿಲ್‍ಟಾಪ್ ಪ್ರದೇಶದ ಖಾಸಗಿ ವ್ಯಕ್ತಿಯೊಬ್ಬರ ಹಿತ್ತಿಲೊಂದರಲ್ಲಿ ಎಂಡಿಎಂಎ ಸೇದುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ನಿವಾಸಿ ನಿಕೇತ್ ಸುರೇಶ್, ಕುದ್ರೋಳಿ ನಿವಾಸಿ ಹುಸೈನ್ ಹಾಗೂ ಕದ್ರಿಯ ಫಾತಿಮತ್ ಫೈರೋಸ್ ಫರ್ವೀನ್ ಬಂಧಿತರು. ಮಂಜೇಶ್ವರ ಠಾಣೆ ಎಸ್.ಐ ಅಜಯ್ ಎಸ್. ಮೆನೋನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಇವರಿಂದ ಮಾದಕ ಪದಾರ್ಥ ಸೇವಿಸಲು ಬಳಸುತ್ತಿದ್ದ ಸಲಕರಣೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.

