ಮುಳ್ಳೇರಿಯ: ಬೆಳ್ಳೂರು ಕೃಷಿ ಭವನ ಮತ್ತು ಬೆಳ್ಳೂರು ಗ್ರಾಮ ಪಂಚಾಯತಿಯ ಸಂಯುಕ್ತ ಆಶ್ರಯದಲ್ಲಿ ಕೃಷಿಕ ದಿನಾಚರಣೆ, ಉತ್ತಮ ಕೃಷಿಕರಿಗೆ ಸನ್ಮಾನ ಸಮಾರಂಭ ಬೆಳ್ಳೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ. ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತ ಕೆ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ, ಬ್ಲಾಕ್ ಪಂಚಾಯತಿ ಸದಸ್ಯೆ ಯಶೋಧ, ವಾರ್ಡ್ ಸದಸ್ಯ ಶ್ರೀಪತಿ, ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಜಯರಾಜ್ ರೈ, ಬೆಳ್ಳೂರು ಪಂಚಾಯತಿ ನಿರ್ವಹಣೆ ಸಮಿತಿ ಉಪಾಧ್ಯಕ್ಷ ಸುಕುಮಾರನ್, ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಜಯಾನಂದ ಕುಳ, ಎ.ಕೆ.ಕುಶಲನ್ ಶುಭಾಶಂಸನೆಗೈದರು.
ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತ ಎಂ. ರೈ, ವಾರ್ಡ್ ಸದಸ್ಯರಾದ ವೀರೇಂದ್ರ ಕುಮಾರ್, ಬೇಬಿ, ಭಾಗೀರತಿ, ಭಾಗೀರತಿ ಆರ್.ರೈ, ದುರ್ಗಾದೇವಿ, ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರು, ಭತ್ತದ ಕೃಷಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅವಿನಾಶ್ ಎಸ್.ಬಿ., ಪಾರ್ವತಿ ಮುಂಡೂರು, ಮಹಾಲಿಂಗ ಮಣಿಯಾಣಿ, ವಸಂತ ಮರದಮೂಲೆ, ಅಮ್ಮು ರೈ ಕೇರಿಕಾನ, ಬಾಲಕೃಷ್ಣ ಪೂಜಾರಿ ಕಡಮಗದ್ದೆ, ಸೂಫಿಮತ್ ಮತ್ತಿಮಾರ್, ರಾಘವೇಂದ್ರ ಟಿ., ನಾರಾಯಣಿ ಮಹಿಲ್, ಸಾಧ್ವಿತ್ ಬಾನಗದ್ದೆ, ಚಂದ್ರಶೇಖರ ಬಲ್ಲಾಳ ಅಡ್ವಳ, ಸುಬ್ಬಣ್ಣ ರೈ ಪೆರುವತ್ತೋಡಿ, ಬಾಲಗೋಪಾಲ ಬೆಳೇರಿ ಇವರನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ಅದ್ವೈತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಕೃಷಿ ಸಹಾಯಕ ಪ್ರಜೀಶ್ ಕುಮಾರ್ ವಂದಿಸಿದರು.

.jpg)
