ಬದಿಯಡ್ಕ: ನೀರ್ಚಾಲು ಏಣಿಯರ್ಪು ಆಸುಪಾಸು ಬೀದಿನಾಯಿಗಳ ದಾಳಿಯಿಂದ ಮೂರರ ಹರೆಯದ ಬಾಲಕಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಆಟೋ ಚಾಲಕ ಹರಿಹರನ್ ಎಂಬವರ ಪುತ್ರಿ ನವಣ್ಯ, ಬಿರ್ಮಿನಡ್ಕ ನಿವಾಸಿ ಅಂಗನವಾಡಿ ನೌಕರೆ ಅಶ್ವತಿ, ರಿಸ್ವಾನ್, ಪುದುಕ್ಕೋಳಿ ನಿವಾಸಿ ಶಾಂತಿ, ಚಂದ್ರನ್, ಬದಿಯಡ್ಕ ನಿವಾಸಿ ಗಣೇಶ್ ಗಾಯಾಳುಗಳು. ಬಾಲಕಿ ನವಣ್ಯ ಮನೆ ಸಿಟೌಟ್‍ನಲ್ಲಿ ಆಟವಾಡುತ್ತಿದ್ದ ಸಂದರ್ಭ ಬೀದಿನಾಯಿಗಳ ಗುಂಪು ದಾಳಿ ನಡೆಸಿದೆ. ಗಾಯಾಳುಗಳು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

