ತ್ರಿಶೂರ್: ಕೇಂದ್ರ ಸಚಿವ ಸುರೇಶ್ ಗೋಪಿ ಅವರ ತ್ರಿಶೂರ್‍ನಲ್ಲಿರುವ ಸಂಸದರ ಕಚೇರಿಗೆ ಪೋಲೀಸ್ ಭದ್ರತೆ ಒದಗಿಸಲಾಗಿದೆ. ಕಚೇರಿಯಲ್ಲಿ ಪೋಲೀಸ್ ಹೊರಠಾಣೆ ಸ್ಥಾಪಿಸಲಾಗಿದೆ.
ಛತ್ತೀಸ್‍ಗಢದಲ್ಲಿ ಬಂಧಿತರಾದ ಮಲಯಾಳಿ ಕ್ರೈಸ್ತ ಸನ್ಯಾಸಿಗಳ ಬಿಡುಗಡೆ ಮತ್ತು ತ್ರಿಶೂರ್‍ನಲ್ಲಿ ಮತದಾರರ ಪಟ್ಟಿ ಅಕ್ರಮಗಳ ಆರೋಪಗಳ ಬಗ್ಗೆ ಸುರೇಶ್ ಗೋಪಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಿರೋಧ ಪಕ್ಷದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.


