ಮಂಜೇಶ್ವರ: ಹೇರೂರು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕರ್ಕಾಟಕ ಮಾಸದ ವಿಶೇಷ ಪೂಜಾ ಸಂದರ್ಭದಲ್ಲಿ ಮೀಯಪದವು ಶ್ರೀ ಗುರುನರಸಿಂಹ ಯಕ್ಷ ಬಳಗ ತಂಡದಿಂದ ಯಕ್ಷಗಾನ ತಾಳಮದ್ದಳೆ ಕವಿ ಕಡಂದಲೆ ರಾಮಯ್ಯ ವಿರಚಿತ 'ರಾಮಾಂಜನೇಯ' ಪ್ರಸಂಗ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತ ರಾಮಪ್ರಸಾದ್ ಮಯ್ಯ ಕೂಡ್ಲು, ಕೇಶವ ಪ್ರಸಾದ್ ಚೆಂಡೆ ಮದ್ದಳೆಯಲ್ಲಿ ವಿಕ್ರಂ ಮಯ್ಯ ಪೈವಳಿಕೆ, ನವೀನಚಂದ್ರ ಮೊಗರ್ನಾಡು, ವಿಘ್ನೇಶ ಕಾರಂತ ಕೂಡ್ಲು ಭಾಗವಹಿಸಿದ್ದು, ಪಾತ್ರವರ್ಗದಲ್ಲಿ ರಾಜಾರಾಮ್ ರಾವ್ ಮೀಯಪದವು, ಯೋಗೀಶ್ ರಾವ್ ಚಿಗುರುಪಾದೆ, ವೇದಮೂರ್ತಿ ಗಣೇಶ ನಾವಡ ಮೀಯಪದವು, ಗುರುರಾಜ ಹೊಳ್ಳ ಬಾಯಾರು, ಅವಿನಾಶ ಹೊಳ್ಳ ವರ್ಕಾಡಿ, ಶಿವರಾಮ ಪ್ರಸಾದ್ ಮಯ್ಯ ಇಚ್ಲಂಗೋಡು, ನರಸಿಂಹ ಮಯ್ಯ ಬಿ.ಸಿ. ರೋಡ್, ವೇಣುಗೋಪಾಲ ಮಜಿಬೈಲು ಭಾಗವಹಿಸಿದ್ದರು.

.jpg)
