ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ವತಿಯಿಂದ ಕೃಷಿಕರ ದಿನಾಚರಣೆ ಅಂಗವಾಗಿ ಕಾಸರಗೋಡು ಕೊಳತ್ತೂರು ನಿವಾಸಿ ಕೇರಳ ಸರ್ಕಾರದ ಯುವಜನ ಕಮಿಷನ್ ಯೂತ್ ಐಕನ್ ಪ್ರಶಸ್ತಿ ಪಡೆದಿರುವ ಶ್ರೀವಿದ್ಯಾ ಇವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು.
ಯೂನಿಟ್ ಸದಸ್ಯೆ, ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್ ಅವರು ಶ್ರೀವಿದ್ಯಾ ಅವರನ್ನು ಶಾಲು ಹೊದಿಸಿದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಕಾರ್ಯದರ್ಶಿ ವಿಶಾಖ್, ಕೋಶಾಧಿಕಾರಿ ಗಣೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.


