ಮಂಜೇಶ್ವರ: ವರ್ಕಾಡಿ ಬವಲಿಗುಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 11ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆ. 27ರಂದು ಜರುಗಲಿದೆ. ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರಗಲಿಕ್ಕಿರುವುದು.
ಬೆಳಗ್ಗೆ ಶ್ರೀಗಣಪತಿ ದೇವರ ಪ್ರತಿಷ್ಠೆಯೊಂದಿಗೆ ದ್ವಾದಶ ನಾಳಿಕೇರ ಗಣಯಾಗ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ ನಡೆದು ಮಹಾ ಸಂತರ್ಪಣೆ ನಡೆಯಲಿರುವುದು. ಸಂಜೆ 5.30ಕ್ಕೆ ಗಣಪತಿ ಯಾತ್ರಾ ಪೂಜೆ ನಡೆದು ಸುಡುಮದ್ದು ಪ್ರದರ್ಶನ, ನಂತರ ಶ್ರೀ ಗಣೇಶನ ಭವ್ಯ ಶೋಭಾ ಯಾತ್ರೆ ಆರಂಭಗೊಂಡು ಶಾಂತಿಪಳಿಕೆ ಮಾರಿಗುಡಿ ಹತ್ತಿರದ ಕೆರೆಯಲ್ಲಿ ವಿಸರ್ಜಿಸಲಾಗುವುದು.
ಮನೋರಂಜನಾ ಕಾರ್ಯಕ್ರಮದಂಗವಾಗಿ ಅಂದು ಬೆಳಿಗ್ಗೆ 10ಕ್ಕೆ ತೌಡುಗೋಳಿ ಶ್ರೀ ದುರ್ಗ ನಾಟ್ಯಾಲಯದ ಮಕ್ಕಳಿಂದ ನೃತ್ಯ ಸಂಭ್ರಮ, ರಾಜ್ಯ ಪ್ರಶಸ್ತಿ ಪುರಸ್ಕøತೆ ವಿದುಷಿ ಶ್ರೀಮತಿ ಉಮಾ ವಿಷ್ಣು ಹೆಬ್ಬಾರ್ ಮತ್ತು ಶಿಷ್ಯ ವೃಂದ ಭಾರತಿ ನೃತ್ಯಾಲಯ ಮುಡಿಪು ಇವರಿಂದ ನೃತ್ಯ ಸಿಂಚನ, ಮಧ್ಯಾಹ್ನ 1ಗಂಟೆಗೆ ತುಳುನಾಡ ಗಾನಗಂಧರ್ವ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ "ಭಕ್ತಿ ಸಂಗೀತ ಗಾನ ಸಂಭ್ರಮ" 3ಕ್ಕೆ ರಾಜೇಶ್ ಕೊಯಿಲ ಸಾರಥ್ಯದಲ್ಲಿ" ಕಾಮಿಡಿ ಶೋ" ನಡೆಯಲಿರುವುದು .

