ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು "ಶ್ರೀ ಡಿ ಲಕ್ಷ್ಮೀನಾರಾಯಣ ರಾವ್ " ಸಭಾಂಗಣದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ದೀಪ ಪ್ರಜ್ವಲನೆಯನ್ನು ಉಪಜಿಲ್ಲಾ ಶಿಕ್ಷಣಾಧಿಕಾರಿ ಜೋರ್ಜ್ ಕ್ರಾಸ್ತ ನೆರವೇರಿಸಿದರು. ಸಭಾಂಗಣದ ನಿರ್ಮಾಣ ಕ್ಕೆ ಕೈಜೋಡಿಸಿದ ವಿದ್ಯಾಭಿಮಾನಿಗಳಿಗೆ ಕೃತಜ್ಞತೆಯ ನ್ನು ಅರ್ಪಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯೆ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬಿ ಆರ್ ಸಿ ಯ ಸುಮಾದೇವಿ ಹಾಗೂ ಡಯಟ್ ನ ಸಂಪನ್ಮೂಲ ವ್ಯಕ್ತಿ ಅಜಿತಾ ಉಪಸ್ಥಿತರಿದ್ದರು. ಈ ಸಂದರ್ಭ 2024 - 25ನೇ ಸಾಲಿನಲ್ಲಿ 7 ನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆಗೈದ ಹಾಗೂ ರಾಷ್ಟ್ರೀಯ ಪ್ರತಿಭನ್ವೇಷಣಾ ಪರೀಕ್ಷೆಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿ ಕುಮಾರಿ ಪ್ರೀತಿಕಾಗೆ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನಿತ್ತು ಅಭಿನಂದಿಸಲಾಯಿತು. ಸಂಸ್ಕøತ ಉರ್ದು ಅರೇಬಿಕ್ ಹಾಗೂ ಕೇರಳ ರಾಜ್ಯಮಟ್ಟದ ಬುಲ್ ಬುಲ್ ಹೀರಕ್ ಪಂಕ್ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು. ಶಾಲಾ ಪ್ರಬಂಧಕಿ ಅನಸೂಯಾ ದೇವಿ, ಎನ್.ಎಮ್.ಓ. ಪ್ರದೀಪ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ರಫೀಕ್, ಉಪಾಧ್ಯಕ್ಷ ಲೋಹಿತ್, ಮಾತೃಸಂಘದ ಅಧ್ಯಕ್ಷೆ ನೆಬಿಸಾ, ಉಪಾಧ್ಯಕ್ಷೆ ಚಂದ್ರಕಲಾ, ಎಸ್.ಎಮ್.ಸಿ. ಅಧ್ಯಕ್ಷ ಹರ್ಷಕುಮಾರ್ ಪಾತೂರಾಯ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಕೆ. ಸ್ವಾಗತಿಸಿದರು. ಶಿಕ್ಷಕಿ ತುಳಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಜ್ಯೋತಿಲಕ್ಷ್ಮಿ ಕೆ ವಂದಿಸಿದರು.


