ಬದಿಯಡ್ಕ: ಬೇಳ ಕೌಮುದಿ ಗ್ರಾಮೀಣ ನೇತ್ರಾಲಯ ಮತ್ತು ಅನ್ವಿತಾ ಟ್ರಸ್ಟ್ ನೇತೃತ್ವದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ನಿರ್ಣಯ ಶಿಬಿರ ಸೆ. 21 ಭಾನುವಾರ ಬೆಳಗ್ಗೆ 9. ರಿಂದ ಮಧ್ಯಾಹ್ನ 12.30ರ ತನಕ ಬೇಳ ಕುಮಾರಮಂಗಲ ಕೌಮುದಿ ಗ್ರಾಮೀಣ ನೇತ್ರಾಲಯದಲ್ಲಿ ನಡೆಯಲಿದೆ. ನೇತ್ರ ತಜ್ಞರಾದ ಡಾ.ಎನ್. ಸುನಿಲ್ ತಪಾಸಣೆ ನಡೆಸುವರು. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರನ್ನು ನೋಂದಾಯಿಸಲು ನೇರವಾಗಿ ಅಥವಾ 9446544155 ಮೊಬೈಲ್ ಸಂಖೈಗೆ ಕರೆ ಮಾಡಬಹುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

