ಪೆರ್ಲ: ಪೆರ್ಲದ ನೇತಾಜಿ ಫ್ರೆಂಡ್ಸ್ ಸರ್ಕಲ್ ಹಾಗೂ ನೇತಾಜಿ ಪಬ್ಲಿಕ್ ಲೈಬ್ರರಿ ವತಿಯಿಂದ ಓಣಂ ಸಂಭ್ರಮಾಚರಣೆ ಸೆ. 4ರಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಠಾರದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಓಣಂ ಔತಣ ಕೂಟ ನಡೆಯುವುದು. ಮಧ್ಯಾಹ್ನ 3.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಲೈಬ್ರರಿ ಕೌನ್ಸಿಲ್ ಮಾಜಿ ಅಧ್ಯಕ್ಷ ಕೆ.ವಿ ಕುಞÂರಾಮನ್ ಸಮಾರಂಭ ಉದ್ಘಾಟಿಸುವರು. ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸುವರು. ದೈವ ಪರಿಚಾರಕ ರಾಧಾಕೃಷ್ಣ ಅಮೆಕ್ಕಳ ಅವರಿಗೆ ಸನ್ಮಾನ, ಎಂ.ಎ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ವಿಜೇತೆ ಸ್ವಾತಿ ಬಿ.ಕೆ ಅವರಿಗೆ ಪ್ರತಿಭಾ ಪುರಸ್ಕಾರ, ಕೇರಳ ಫೋಕ್ಲೋರ್ ಪ್ರಶಸ್ತಿ ವಿಜೇತ ಸುಭಾಷ್ ಅರುಕ್ಕರ ಮತ್ತು ತಂಡದಿಂದ ಗಾನಮೇಳ ನಡೆಯುವುದು.

