ಕಾಸರಗೋಡು: ದಸರಾ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಸೆ. 27ರಂದು ಮಧ್ಯಾಹ್ನ 1.30ಕ್ಕೆ ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ಕ್ಷೇತ್ರದಲ್ಲಿ ಜರುಗಲಿದೆ. ಹಿರಿಯ ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಉದ್ಘಾಟಿಸುವರು. ಸಾಹಿತಿ ಡಾ. ಸುರೇಶ್ ನೆಗಳಗುಳಿ ಅಧ್ಯಕ್ಷತೆ ವಹಿಸುವರು.
ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕøತಿಕ ಸಮಿತಿಯ ಜಂಟಿ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಸಹಕಾರದಲ್ಲಿ ಕಾರ್ಯಕ್ರಮ ಜರುಗಲಿದೆ. ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕ, ಪ್ರಾಧ್ಯಾಪಕ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು, ಶಿಕ್ಷಕಿ ರೇಖಾ ಸುದೇಶ್ ರಾವ್, ಶೋಭಾ ದಿನೇಶ್ ಉದ್ಯಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಕೆ. ನರಸಿಂಹ ಭಟ್ ಏತಡ್ಕ, ಪ್ರಭಾವತಿ ಕೆದಿಲಾಯ ಪುಂಡೂರು, ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು. ಶಶಿಕಲಾ ಟೀಚರ್ ಕುಂಬ್ಳೆ, ಆದ್ಯಂತ್ ಅಡೂರು, ಡಾ. ಸುರೇಶ್ ನೆಗಳಗುಳಿ, ಲಕ್ಷ್ಮಿ ವಿ ಭಟ್, ಚಿತ್ರಕಲಾ ದೇವರಾಜ ಆಚಾರ್ಯ ಸೂರಂಬೈಲ್, ಕೆ. ಎಸ್ ಮಂಜುನಾಥ ಹರಿಹರಪುರ, ರೇಖಾ ಸುದೇಶ್ ರಾವ್, ಶೋಭಾ ದಿನೇಶ್ ಉದ್ಯಾವರ ಇವರಿಗೆ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ-2025 ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಂಗವಾಗಿ 'ಕಾಸರಗೋಡು ದಸರಾ ಕವಿಗೋಷ್ಠಿ- 2025'ನಡೆಯುವುದು.

