ತಿರುವನಂತಪುರಂ: ಕ್ರಿಮಿನಲ್ ಪ್ರಕರಣಗಳ ಆರೋಪಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಲು ಕೇರಳ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಪದವಿಪೂರ್ವ ಕೋರ್ಸ್‍ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಾವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ಅಫಿಡವಿಟ್ ಅನ್ನು ಸಲ್ಲಿಸಬೇಕಾಗುತ್ತದೆ.
ಸಿಂಡಿಕೇಟ್ ಉಪಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಿಂಡಿಕೇಟ್ ಉಪಸಮಿತಿಯ ಅಧ್ಯಕ್ಷತೆಯನ್ನು ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ವಹಿಸಿದ್ದರು.
ವಿದ್ಯಾರ್ಥಿಗಳು ಅಫಿಡವಿಟ್ ಅನ್ನು ಉಲ್ಲಂಘಿಸಿದರೆ ಕಾಲೇಜು ಪ್ರಾಂಶುಪಾಲರು ಅವರ ಪ್ರವೇಶವನ್ನು ರದ್ದುಗೊಳಿಸಬಹುದು. ರ್ಯಾಗಿಂಗ್ ಮತ್ತು ಹಿಂಸಾಚಾರವನ್ನು ತಡೆಯುವುದು ಇದರ ಉದ್ದೇಶವಾಗಿದೆ.

