ಮಧೂರು: ಉಳಿಯ ತರುಣ ಕಲಾವೃಂದದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರ ನೇತೃತ್ವದಲ್ಲಿ ನಡೆದ 2025-26 ರ ವಾರ್ಷಿಕ ಮಹಾಸಭೆಯಲ್ಲಿ, ಅಧ್ಯಕ್ಷರಾಗಿ ರಾಮಕಿಶೋರ್ ಆಸ್ರ, ಉಪಾಧ್ಯಕ್ಷರಾಗಿ ಅನಿಲ್ ಮಾಸ್ತರ್, ವಿಠಲ ಗಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಗಟ್ಟಿ,
ಜೊತೆಕಾರ್ಯದರ್ಶಿಯಾಗಿ ಪದ್ಮರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ಜಗದೀಶ್ ಆಚಾರ್ಯ, ಕೋಶಾಧಿಕಾರಿಯಾಗಿ ಅರುಣ್ ರಾಜ್ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೇರಳೋತ್ಸವ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಪ್ರತಿಯೊಬ್ಬ ಸದಸ್ಯರೂ ಶ್ರದ್ಧೆಯಿಂದ ಭಾಗವಹಿಸಿ ಸದಾ ಪ್ರಥಮ ಸ್ಥಾನಗಳನ್ನು ಪಡೆದು ನಾಡಿಗೆ ಕೀರ್ತಿ ತಂದ ಸದಸ್ಯರನ್ನು ಗೌರವಿಸಲಾಯಿತು. ತರುಣ ಕಲಾವೃಂದ ಮಹಿಳಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಸಹ ನಿರ್ಧರಿಸಲಾಯಿತು.
ಮಹಿಳಾ ಸಮಿತಿಯಲ್ಲಿ, ದೀಪ ವಾಸು ಉಳಿಯ ಅವರನ್ನು ಅಧ್ಯಕ್ಷರಾಗಿ, ರಿನಿ ರೆಜಿ ಅವರನ್ನು ಉಪಾಧ್ಯಕ್ಷರಾಗಿ, ಜಯಪ್ರಭ ದಿನೇಶ್ ಗಟ್ಟಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ನಿಶಾ ದಿನೇಶ್ ಉಳಿಯ ಅವರನ್ನು ಜೊತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಾಂಸ್ಕøತಿಕ ಸಂಘಟಕರಾಗಿ ದಿವ್ಯಾ ಗಟ್ಟಿ ಪರಕ್ಕಿಲ ಹಾಗೂ ಶರಣ್ಯಾ ನಾರಾಯಣನ್ ಇವರನ್ನು ನೇಮಿಸಲಾಯಿತು.
ಸಭೆಯಲ್ಲಿ ಸುರೇಶ್ ಯು.ಆರ್, ಬಾಲಕೃಷ್ಣ ಉಳಿಯ, ವಿಠಲ ಗಟ್ಟಿ, ರಮ್ಯಾ ಉದಯ್, ಮೋಹಿನಿ ಗಟ್ಟಿ, ರಸಿಕ, ನಿರ್ಮಲಾ ನಾರಾಯಣ, ಪ್ರಮೀಳಾ ರಾಜೇಶ್ ಹಾಗೂ ಸಂಘದ ಹಿರಿಯ, ಕಿರಿಯ ಸದಸ್ಯರು ಉಪಸ್ಥಿತರಿದ್ದರು.

