HEALTH TIPS

ಪುತ್ತಿಗೆಯಲ್ಲಿಯೂ ಬಿಜೆಪಿಯ ಗೆಲುವು ನಮ್ಮ ಗುರಿ: ವಿಜಯ ರೈ

ಕುಂಬಳೆ: ಪ್ರಪಂಚದ ರಾಜಕೀಯ ಪಕ್ಷಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಬಿಜೆಪಿ ಕೇಂದ್ರದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದಶಕಗಳಿಂದ ಆಡಳಿತ ನಡೆಸುತ್ತಿರುವ ಈ ಸುವರ್ಣ ಕಾಲಘಟ್ಟದಲ್ಲಿ ಪುತ್ತಿಗೆ ಪಂಚಾಯತಿನಲ್ಲಿಯೂ ಬಿಜೆಪಿ ಮೊದಲು ಸ್ಥಾನಕ್ಕೆ ಏರಬೇಕು ಎಂದು ಬಿಜೆಪಿ ಕೋಝೀಕೋಡ್ ವಲಯ ಉಪಾಧ್ಯಕ್ಷ ವಿಜಯ್ ರೈ ಮಂಗಲ್ಪಾಡಿ ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿ ವತಿಯಿಂದ ಎಡನಾಡು-ಕಣ್ಣೂರು ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಬುಧವಾರ ನಡೆದ ಚುನಾವಣಾ ಕಾರ್ಯಗಾರ ಹಾಗೂ ಮಾಹಿತಿ ಶಿಬಿರದಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಪಕ್ಷದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲೋತ್ ಕಾರ್ಯಕರ್ತರಿಗೆ ತ್ರೀತಲ ಪಂಚಾಯತ್ ಚುನಾವಣೆ ತಯಾರಿ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತಿ ಬಿಜೆಪಿ ಅಧ್ಯಕ್ಷ ಪುರುಷೋತ್ತಮ ದೇರಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ವಾರ್ಡ್ ಸಮ್ಮೇಳನಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಪಂಚಾಯತಿ ಪ್ರಧಾನ ಕಾರ್ಯದರ್ಶಿ ಜನಾರ್ಧನ ಕಣ್ಣೂರು ಸ್ವಾಗತಿಸಿ ವಿಶ್ವನಾಥ ಜಿ ಧನ್ಯವಾದ ಸಮರ್ಪಿಸಿದ ಈ ಕಾರ್ಯಕ್ರಮದಲ್ಲಿ ಕುಂಬಳೆ ಮಂಡಲ ಪ್ರದಾನಕಾರ್ಯದರ್ಶಿಗಳಾದ  ವಸಂತ್ ಕುಮಾರ್ ಮಯ್ಯ ಹಾಗೂ ಅನಿಲ್ ಮಣಿಯಂಪಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಕ್ಷದ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಗಳ ಪ್ರಮುಖರು ಮತ್ತು ಹಿರಿಯ ಕಿರಿಯ ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries