ಪೆರ್ಲ : ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ರೂಪೀಕರಣ ಸಭೆ -ಹಾಗೂ ನೂತನ ಮಂದಿರದ ನೀಲ ನಕ್ಷೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಂದಿರದ ಸೇವಾ ಸಮಿತಿ ಅಧ್ಯಕ್ಷ ಅನಂದ ನಾಯ್ಕ್ ಅರೆಮಂಗಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇದಮೂರ್ತಿ ಚಂದ್ರಶೇಖರ ನಾವಡ ನೀಲಿನಕ್ಷೆಯ ತ್ರಿಡಿ ಬಿಡುಗಡೆಗೊಳಿಸಿದರು. ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಸದಾಶಿವ ಭಟ್ ಹರಿನಿಲಯ, ಶಾರದ ವೈ, ಅನಿಲ್ ಕುಮಾರ್ ಕೆ.ಪಿ, ರಾಧಾಕೃಷ್ಣ ನಾಯಕ್ ಶೇಣಿ, ಈಶ್ವರ ನಾಯ್ಕ ನೀರೊಳ್ಯ, ಗೋಪಾಲಕೃಷ್ಣ ಭಟ್, ಗೋವಿಂದ ನಾಯ್ಕ ಅರೆಮಂಗಿಲ, ಕೃಷ್ಣಪ್ಪ ನಾಯ್ಕ, ಚನಿಯಪ್ಪ ಪೂಜಾರಿ ಅಲಾರ್, ಪ್ರೇಮಾ ಎಂ.ಮಣಿಯಂಪಾರೆ, ಗಿರಿಯಪ್ಪ ಪೂಜಾರಿ ಗುಂಡಿತ್ತಾರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂದಿರ ನೀಲನಕ್ಷೆ ತಯಾರುಗೊಳಿಸಿದ ಇಂಜಿನಿಯರ್ ಅಭಿಲಾಷ್ ಪಿ.ಕೆ.ಅವರನ್ನು ಅಭಿನಂದಿಸಲಾಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಕುಂಞಣ್ಣ ಮಾಸ್ತರ್ ನೆಕ್ಕರೆಪದವು (ಅಧ್ಯಕ್ಷ), ಸಂಕಪ್ಪ ಸುವರ್ಣ (ಪ್ರ.ಕಾರ್ಯದರ್ಶಿ), ಉದಯ ಚೆಟ್ಟಿಯಾರ್ ಬಜಕೂಡ್ಲು (ಕೋಶಾಧಿಕಾರಿ) ಹಾಗೂ ಇನ್ನಿತರ ಸಮಿತಿ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಮಹಿಳಾ ಸಮಿತಿ ಸದಸ್ಯರು ಪ್ರಾರ್ಥನೆ ಹಾಡಿದರು. ಜಯ ಮಣಿಯಂಪಾರೆ ಸಮಿತಿ ರಚನೆಗೆ ನೇತೃತ್ವ ನೀಡಿದರು. ಬಿ.ಪಿ.ಶೇಣಿ ಪ್ರಸ್ತಾವಿಕವಾಗಿ ಮಾತನಾಡಿದರು. ರವಿ ಎನ್.ಪಿ.ಸ್ವಾಗತಿಸಿ ವಸಂತ ಎನ್. ವಂದಿಸಿದರು.

.jpg)
