ಕಾಸರಗೋಡು: ಶ್ರೀನಾರಾಯಣ ಧರ್ಮ ಪರಿಪಾಲನಾ(ಎಸ್‍ಎನ್‍ಡಿಪಿ)ಯೋಗಂ ಕಾಸರಗೋಡು ಕೂಡ್ಲು ಶಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಕುಡ್ಲು ಶ್ರೀ ಗೋಪಾಲ ಕೃಷ್ಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು.
ಭಗವತಿ ಸೇವಾ ಸಂಘದ ಮಾಜಿ ಅಧ್ಯಕ್ಷ ಕೃಷ್ಣನ್ ಕೂಡ್ಲು ಸಮಾರಂಭ ಉದ್ಘಾಟಿಸಿದರು. ಸ್ವಾಗತ ಸಂಘದ ಅಧ್ಯಕ್ಷೆ ಹಾಗೂಮಧೂರು ಗ್ರಾಮ ಪಂಚಾಯಿತಿ ಸದಸ್ಯೆ ಜನನಿ ಅನಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಸ್‍ಡಿಪಿ ಯೋಗಂ ನಿರ್ದೇಶಕ ವಕೀಲ ಪಿ.ಕೆ. ವಿಜಯನ್, ವಡಗರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಸಿ.ಎಚ್ ಆದಿರಾ ಕೂಡ್ಲು, ಒಕ್ಕೂಟದ ಕಾರ್ಯದರ್ಶಿ ಗಣೇಶ ಪಾರಕಟ್ಟ, ಯೂನಿಯನ್ ಪಂಚಾಯಿತಿ ಸದಸ್ಯ ಮೋಹನನ್ ಮೀಪುಗುರಿ, ಭಗವತಿ ಸೇವಾ ಸಂಘ ಕೂಡ್ಲು ಗ್ರಾಮ ಸಮಿತಿ ಕಾರ್ಯದರ್ಶಿ ಕೆ.ಅನಿಲ್.ಕುಮಾರ್, ಭಗವತಿ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ರಾಜಗೋಪಾಲ್ ಮೊಸಲಾದವರು ಉಪಸ್ಥಿತರಿದ್ದರು. ಎಸ್ ಎನ್‍ಡಿಪಿ ಕೂಡ್ಲು ಶಾಖೆಯ ಕಾರ್ಯದರ್ಶಿ ವಿಜಯನ್ ಮನ್ನಿಪ್ಪಾಡಿ ಸ್ವಾಗತಿಸಿದರು. ರಮಣಿ ಗಿರೀಶ್ ವಂದಿಸಿದರು.

