ಹಬ್ಬದ ಋತುವಿನಲ್ಲಿ ಉಡುಗೊರೆಗಳಿಗಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಲು ಈ ಆದೇಶವನ್ನು ನೀಡಲಾಗಿದೆ.
ಅಗತ್ಯವಲ್ಲದ ವೆಚ್ಚಗಳಿಗೆ ಕಡಿವಾಣಹಾಕುವ ಕೇಂದ್ರ ಸರಕಾರದ ನೀತಿಯ ಭಾಗ ಇದಾಗಿಯೆಂದು ಇಲಾಖೆ ತಿಳಿಸಿದೆ. ಇಲಾಖೆಗಳು ಅಥವಾ ಸಚಿವಾಲಯಗಳಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಥವಾ ಉನ್ನತ ಅಧಿಕಾರಿಗಳಿಗೆ ಉಡುಗೊರೆಗಳನ್ನು ನೀಡುವುದು, ಇತ್ಯಾದಿ ಇವುಗಳಲ್ಲಿ ಸೇರಿವೆ.
ಸಾರ್ವಜನಿಕ ಸಂಪನ್ಮೂಲಗಳ ವಿವೇಕಯುತ ಹಾಗೂ ನ್ಯಾಯಬದ್ಧ ಬಳಕೆಯನ್ನು ಈ ನೀತಿಯು ಮುಂದುವರಿಸಲಿದೆಯೆಂದು ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ವಿ.ಕೆ.ಸಿಂಗ್ ಅವರ ಅಂಕಿತವಿರುವ ಅಧಿಸೂಚನೆ ತಿಳಿಸಿದೆ. ಈ ಅಧಿಸೂಚನೆ ತಕ್ಷಣವೇ ಜಾರಿಗೆ ಬರಲಿದೆಯೆಂದು ಅದು ಹೇಳಿದೆ.

