ಭಾರತಕ್ಕೆ ನಾನು ವಿಶ್ ಮಾಡುತ್ತೇನೆ ಎಂದು ಶಶಿ ತರೂರ್ ಅವರು ಮಾಡಿರುವ ಟ್ವೀಟ್ ಹೊಸ ಸಂಚಲನ ಹಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನು ಸಂಸದ ಶಶಿತರೂರ್ ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ವಿಚಾರವು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ. ರಾಜಕೀಯವಾಗಿ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿರುವ ಶಶಿ ತರೂರ್ ಅವರು ಬಿಜೆಪಿಗೆ ಸೇರುವ ಕಾಲ ಸನ್ನಿಹಿತವಾಗಿದೆ. ಇದೇ ಕಾರಣಕ್ಕೆ ಅವರು ಬಿಜೆಪಿಯ ಕೆಲವೊಂದು ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ, ಅದೇ ಸಂದರ್ಭದಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ಶಶಿ ತರೂರ್ ಅವರು ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಗ್ರೇಟ್ ಜಾಬ್ ಟೀಮ್ ಇಂಡಿಯಾ! (ನಾನು ಕ್ರಿಕೆಟ್ ಬಗ್ಗೆ ಮಾತನಾಡುತ್ತಿಲ್ಲ!)
ಡೇವಿಸ್ ಕಪ್ ವಿಶ್ವ ಗ್ರೂಪ್ I ಟೈನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 3-1 ಅಂತರದ ಐತಿಹಾಸಿಕ ಗೆಲುವಿನ ಸುದ್ದಿಯನ್ನು ಈಗಷ್ಟೇ ನೋಡಿದೆ. 1993 ರ ನಂತರ ಯುರೋಪಿಯನ್ ರಾಷ್ಟ್ರದ ವಿರುದ್ಧ ಭಾರತವು ವಿದೇಶದಲ್ಲಿ ಗೆದ್ದ ಮೊದಲ ಗೆಲುವು ಇದು. 2026ರ ಅರ್ಹತಾ ಸುತ್ತಿಗೆ! ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತೀಯ ಪುರುಷರ ಕ್ರಿಕೆಟ್ ತಂಡ ಸಹ ಭಾನುವಾರದ ಪಂದ್ಯದಲ್ಲಿ ಅತ್ಯುತ್ತಮ ಗೆಲುವು ಸಾಧಿಸಿದೆ. ಆದರೆ, ಆ ಗೆಲುವಿನ ಬಗ್ಗೆ ಸಂಸದ ಶಶಿ ತರೂರ್ ಅವರು ಯಾವುದೇ ಟ್ವೀಟ್ ಮಾಡಿಲ್ಲ.
ಇದಕ್ಕೆ ಹಲವರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ನೀವು ಅದ್ಭುತ ಟೆನಿಸ್ ವಿಜಯೋತ್ಸವವನ್ನು ಆಚರಿಸಬಹುದಿತ್ತು. ಆದರೆ ಅದರಲ್ಲಿ ಕ್ರಿಕೆಟ್ ವಿಷಯವನ್ನು ಸೇರಿಸುವ ಅಗತ್ಯತೆ ಇರಲಿಲ್ಲ. ಗೌರವದಿಂದ ಹೇಳಬೇಕೆಂದರೆ, ಗಮನ ಸೆಳೆಯುವ ಕಲೆ ಜೀವಂತವಾಗಿದೆ ಮತ್ತು ಚೆನ್ನಾಗಿದೆ ಎಂದು ನೆಟ್ಟಿಗರೊಬ್ಬರು ರಿಯಾಕ್ಟ್ ಮಾಡಿದ್ದಾರೆ.
ಅದ್ಭುತವಾಗಿ ಹೇಳಿದ್ದೀರಿ ಸರ್! ಕ್ರಿಕೆಟ್‌ನಿಂದ ಟೆನಿಸ್‌ಗೆ ನಮ್ಮ ಆಲೋಚನೆಗಳನ್ನು ಕೊಂಡೊಯ್ಯುವ ಅದ್ಭುತ ಮಾರ್ಗ ಒಪ್ಪಬೇಕು. ಭಾರತ ಕೇವಲ ಕ್ರಿಕೆಟ್‌ನ ಭೂಮಿ ಅಲ್ಲ ಎಂಬುದನ್ನು ನೆನಪಿಸುತ್ತದೆ. ಬಿಸಿಸಿಐ ಹಣ ಹೂಡುವಲ್ಲಿ ನಿರತವಾಗಿರುವಾಗ, ನಾವು ಇತರ ಶ್ರಮಶೀಲ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಮಯ. ಎಂದು ಮತ್ತೊಬ್ಬ ನೆಟ್ಟಗರು ರಿಯಾಕ್ಟ್ ಮಾಡಿದ್ದಾರೆ.

