ಕಾಸರಗೋಡು: ಲೇಖಕಿ, ಕವಯಿತ್ರಿ, ಸಂಶೋಧಕಿ ಮತ್ತು ವಿಮರ್ಶಕಿ, ವಿ. ಎಂ. ಇನಾಮ್ದಾರ್ ಪ್ರಶಸ್ತಿ ವಿಜೇತೆ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಅವರು ಬರೆದಿರುವ ನೂತನ ಪುಸ್ತಕ "ಆನೆಕಾಲಿಗೆ ಅಂಕುಶ- ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ. ನರಹರಿ ಮತ್ತು ಐ. ಎ. ಡಿ" ಕೃತಿ ನ. 1 ರಂದು ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಬಿಡುಗಡೆಯಾಗಲಿದೆ.
50 ರ ಹರೆಯದ ಕಾಂತಾವರ ಕನ್ನಡ ಸಂಘ (ರಿ) ಇದರ ಸುವರ್ಣ ಸಂಭ್ರಮೋತ್ಸವದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್. ಕೃತಿ ಬಿಡುಗಡೆಗೊಳಿಸಲಿದ್ದು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ವೈದ್ಯಕೀಯ ಲೋಕದಲ್ಲಿ ಇಂತಹದೊಂದು ಸಾಧನೆ ಮಾಡಿದ ಕಾಸರಗೋಡಿಗ ಡಾ. ನರಹರಿ ಮತ್ತು ಐ. ಎ. ಡಿ.ಯನ್ನು ಓದುಗರಿಗೆ ಸರಳ ಮತ್ತು ವಿಶಿಷ್ಟವಾಗಿ ಈ ಪುಸ್ತಕದ ಮೂಲಕ ಡಾ.ಯು. ಮಹೇಶ್ವರಿ ಪರಿಚಯಿಸಿದ್ದಾರೆ. ನವಂಬರ್ 1 ರಂದು ಕಾಂತಾವರ ಕನ್ನಡ ಸಂಘದಲ್ಲಿ ಬೆಳಗ್ಗೆ 9:30 ರಿಂದ ಸಮಾರಂಭ ನಡೆಯಲಿದೆ ಎಂದು ಐಎಡಿ ಮತ್ತು ಕಾಂತಾವರ ಕನ್ನಡ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.


