ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆರ್ಕಳದ ಬಹು ಅಂತಸ್ತಿನ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಬೃಹತ್ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು ಜೂಜಾಟ ನಿರತರಾಗಿದ್ದ 20ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ ದಂಧೆಗೆ ಬಳಸಿದ್ದ 55ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕುಂಡಂಗುಳಿ ನಿವಾಸಿ ಮಹಮ್ಮದ್‍ಕುಞÂ, ಅಬ್ದುಲ್ ಹಮೀದ್, ಅಬ್ದುಲ್ ಶುಕೂರ್, ಟಿ. ಇಬ್ರಾಹಿಂ, ಕುಂಬಳೆ ಇಚ್ಲಂಪಾಡಿಯ ಎಚ್ ರತೀಶ್, ಅಬ್ದುಲ್ ಸಾದಿಕ್, ಪನಯಾಲ್‍ನ ಪಿ.ಎಸ್ ಇಲ್ಯಾಸ್, ಕುಂಡಂಗುಳಿಯ ಸಿ.ಕೆ ಮಜೀದ್, ಬೇಕಲ ಕಲ್ಲಿಂಗಾಲ್ ನಿವಾಸಿ ಪಿ. ಫೈಸಲ್, ಮುಳಿಯಾರಿನ ಕೆ.ಎಂ ಪವಾಸ್, ಬಂಟ್ವಾಳ ಶಾಂತಿಯಂಗಡಿ ನಿವಾಸಿ ಸಮೀರ್, ಬಂಟ್ವಾಳ ಬಿ.ಸಿ ರೋಡ್ ಪರ್ಳಿ ಹೌಸ್‍ನ ಎಂ. ರಿಯಾಸ್, ಕಾಸರಗೋಡು ಅಡ್ಕತ್ತಬೈಲಿನ ಕೆ. ಅನಿಲ್, ಬಂದ್ಯೋಡಿನ ಮುಸ್ತಫಾ ಕೆ.ಪಿ, ಬಾಗಲಕೋಟೆ ನಿವಾಸಿ ಚಿದಾನಂದ, ಚಿತ್ತಾರಿ ನಿವಾಸಿ ಶಂಸೀರ್ ಅಬ್ಬಾಸ್, ಮಂಗಳೂರು ಸಜಿಪ ಮೂಡ ನಿವಾಸಿ ಅಸೀಸ್, ದೇಲಂಪಾಡಿ ಪರಪ್ಪೆ ನಿವಾಸಿ ಕೆ.ಕೆ ಅಶ್ರಫ್, ಮೊಯ್ದು, ಉಪ್ಪಳ ಕಂಚಿಕಟ್ಟೆ ಹೌಸ್‍ನ ಮಹಮ್ಮದ್ ಹಸೈನಾರ್ ಬಂಧಿತರು.
ವಿದ್ಯಾನಗರ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ ಶೈನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಇತರ ರಾಜ್ಯ ಕಾರ್ಮಿಕರು ಹಾಗೂ ಇತರ ಜಿಲ್ಲೆಗಳ ನಿವಾಸಿಗಳನ್ನೊಳಗೊಮಡ ಹೈಟೆಕ್ ಜೂಜಾಟ ಕೇಂದ್ರ ಇದಾಗಿತ್ತು.

