ಕೊಚ್ಚಿ: ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಲು ಮತ್ತು ಶಾಲೆಗಳಲ್ಲಿ ಶಿಸ್ತನ್ನು ಖಚಿತಪಡಿಸಿಕೊಳ್ಳಲು ಬೆತ್ತ 'ಪ್ರಯೋಗಿಸುವುದು' ಅಪರಾಧವಲ್ಲ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಐದು ವರ್ಷದ ವಿದ್ಯಾರ್ಥಿಗಳ ಕಾಲಿಗೆ ಬೆತ್ತದಿಂದ ಹೊಡೆದಿದ್ದಕ್ಕಾಗಿ ಯುಪಿ ಶಾಲಾ ಶಿಕ್ಷಕನ ವಿರುದ್ಧ 2019 ರಲ್ಲಿ ನಡೆದ ಪ್ರಕರಣದಲ್ಲಿ ಮುಂದಿನ ಕ್ರಮವನ್ನು ನ್ಯಾಯಮೂರ್ತಿ ಸಿ. ಪ್ರದೀಪ್ ಕುಮಾರ್ ಅವರ ಆದೇಶ ರದ್ದುಗೊಳಿಸಿದೆ.
ಹೊಡೆತ ಬಿದ್ದ ಮಗುವನ್ನು ತಿದ್ದವುದಷ್ಟೆ ತನ್ನ ಏಕೈಕ ಉದ್ದೇಶವಾಗಿತ್ತೆಂದು ಶಿಕ್ಷಕ ವಾದಿಸಿದ್ದರು. ಅಂತಹ ಸಂದರ್ಭಗಳಲ್ಲಿ, ಶಿಕ್ಷಕರ ಶಿಕ್ಷೆಯ ಕ್ರಮದ ಉದ್ದೇಶವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪರಸ್ಪರ ಉಗುಳುತ್ತಿದ್ದ ಮತ್ತು ನಂತರ ಪ್ಲಾಸ್ಟಿಕ್ ಪೈಪ್‍ನಿಂದ ಪರಸ್ಪರ ಹೊಡೆದುಕೊಳ್ಳುತ್ತಿದ್ದ ಮೂವರು ಮಕ್ಕಳನ್ನು ನಿಯಂತ್ರಿಸಲು ಶಿಕ್ಷಕ ಬೆತ್ತವನ್ನು ಬಳಸಿದ್ದರು. ಮಗುವಿನ ಪೆÇೀಷಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ವಡಕ್ಕಂಚೇರಿ ಪೋಲೀಸರು ಪ್ರಕರಣ ದಾಖಲಿಸಿದ್ದರು.

