ಕುಂಬಳೆ: ಮಾರಾಟ ನಡೆಸಿಕೊಡುವುದಾಗಿ ಕಾರು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಕುಂಬಳೆ ಸನಿಹದ ಪೇರಾಲ್‍ಕಣ್ಣೂರು ನಿವಾಸಿ ಹಾಲಿಮತ್ ಸಾಹಿನಾ ನೀಡಿದ ದೂರಿನನ್ವಯ ಪುತ್ತಿಗೆ ಮುಗು ರಸ್ತೆಯ ಅಬ್ದುಲ್ ರಶೀದ್, ಸೀತಾಂಗೋಳಿಯ ಮಹಮ್ಮದ್ ರೆಜು, ನೀರ್ಚಾಲು ಗೋಳಿಯಡ್ಕ ನಿವಾಸಿ ಜಿಯಾದ್ ಹಾಗೂ ಚೆಟ್ಟುಂಗುಇಳಿ ನಿವಾಸಿ ಅಶ್‍ಪಾಕ್ ಎಂಬವರಿಗೆ ಈ ಕೇಸು.
ಕಾರಿನ ಸಾಲ ತೀರಿಸುವುದರ ಜತೆಗೆ ಉತ್ತಮ ಬೆಲೆಗೆ ಮಾರಾಟಮಾಡಿಕೊಡುವುದಾಗಿ ತಿಳಿಸಿ 2024ರ ಜೂ.10ರಂದು ಒಂದನೇ ಆರೋಪಿ ಪಡೆದುಕೊಂಡಿದ್ದು, ತನಗೆ ಹಣ ನೀಡದೆ, ಕಾರನ್ನೂ ವಾಪಾಸು ಮಾಡದೆ ವಂಚಿಸಿದ್ದಾರೆ. ನಂತರ ಇತರ ಆರೋಪಿಗಳು ಸೇರಿ ಈ ಕಾರನ್ನು ಬಾಡಿಗೆಗೆ ನೀಡುತ್ತಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದಊರಿನಲ್ಲಿ ತಿಳಿಸಿದ್ದಾರೆ.

