ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಸನಿಹದ ಕಟ್ಟಡದಲ್ಲಿ ಲಿಫ್ಟ್ ಒಳಗೆ ಸಿಲುಕಿಕೊಂಡ ನಾಲ್ವರನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿ ಹೊರತಂದಿದ್ದಾರೆ. ನಾಲ್ವರು ಯುವಕರ ತಂಡ ಬಸ್‍ನಿಲ್ದಾಣ ಸನಿಹದ ಫ್ಲ್ಯಾಟ್ ಒಂದರ ನೆಲಮಹಡಿಯಿಂದ ಎರಡನೇ ಅಂತಸ್ತಿಗೆ ತೆರಳುವ ಮಧ್ಯೆ ಲಿಫ್ಟ್ ಸ್ಥಗಿತಗೊಂಡಿತ್ತು. ಲಿಫ್ಟಿನಲ್ಲಿ ಸಿಲುಕಿಕೊಂಡವರು ತಕ್ಷಣ ಫ್ಲ್ಯಾಟ್‍ನಲ್ಲಿರುವ ಇತರರರಿಗೆ ಮಾಹಿತಿ ನೀಡಿದ್ದಾರೆ. ಫ್ಲ್ಯಾಟ್ ನಿವಾಸಿಗಳು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಲಿಫ್ಟನ್ನು ಪ್ಲ್ಯಾಟ್‍ನ ಎರಡನೇ ಮಹಡಿಗೆ ತಲುಪಿಸಿ, ನಾಲ್ಕೂ ಮಂದಿಯನ್ನು ರಕ್ಷಿಸಿದ್ದಾರೆ.

