ಕುಂಬಳೆ: ಪೆರ್ಲ ಸನಿಹದ ಕಾಟುಕುಕ್ಕೆ ಬಳಿಯ ಸೂರ್ಡೇಲು ನಿವಾಸಿ, ಲೀಲಾವತೀ-ದಿ. ಶೀನ ಶೆಟ್ಟಿ ದಂಪತಿ ಪುತ್ರ ಆಟೋ, ಜೀಪು ಚಾಲಕ ತಾರಾನಾಥ ರೈ(46)ಅವರ ಮೃತದೇಹ ಕುಂಬಳೆ ರೈಲ್ವೆ ನಿಲ್ದಾಣ ಸನಿಹ ರೈಲ್ವೆ ಹಳಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ರುಂಡದಿಂದ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದ್ದು, ಸ್ಥಳೀಯರು ಕುಂಬಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮೃತದೇಹದ ಜೇಬಿನಲ್ಲಿದ್ದ ಎಟಿಎಂ ಕಾರ್ಡಿನಲ್ಲಿದ್ದ ಹೆಸರು ಆಧರಿಸಿ ಮಾಹಿತಿ ಅರಸಿದಾಗ ಗುರುತು ಲಭ್ಯವಾಗಿದೆ.
ಪೆರ್ಲದಲ್ಲಿ ದೀರ್ಘ ಕಾಲದಿಂದ ಆಟೋರಿಕ್ಷಾ, ಜೀಪು ಚಾಲಕರಾಗಿ ದುಡಿಯುತ್ತಿದ್ದ ಇವರು, ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದು, ಇದಕ್ಕಾಗಿ ಚಿಕಿತ್ಸೆಯಲ್ಲಿದ್ದರು. ಮಂಗಳವಾರ ಮಧ್ಯಾಹ್ನ ಪೆರ್ಲ ಪೇಟೆಯಿಂದ ಬಸ್ಸಿನಲ್ಲಿ ಇವರು ಕುಂಬಳೆ ಭಾಗಕ್ಕೆ ತೆರಳುವುದನ್ನು ಕಂಡವರಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


