ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ದ ಎರಡು ನೂತನ ಬಸ್‍ಗಳು ಕಾಸರಗೋಡು-ಮಂಗಳೂರು ರೂಟಿನಲ್ಲಿ ಪಾಯಿಂಟ್ ಟು ಪಾಯಿಂಟ್ ಸರ್ವೀಸ್ ನಡೆಸಲಿದೆ. ಹೆಚ್ಚಿನ ಆದಾಯ ಹೊಂದಿರುವ ಈ ರೂಟಿನಲ್ಲಿ ನೂತನ ಬಸ್‍ಗಳು ಫಾಸ್ಟ್ ಪ್ಯಾಸಂಜರ್ ಮತ್ತು ನಿಯಮಿತ ನಿಲುಗಡೆಯನ್ವಯ ಸಂಚಾರ ನಡೆಸಲಿದೆ. ಶೀಘ್ರ ಹೊಸ ಬಸ್ ಸಂಚಾರ ಆರಂಭಿಸುವುದಾಗಿ ಕೆಎಸ್ಸಾರ್ಟಿಸಿ ನಿರ್ದೇಶಕರು ತಿಳಿಸಿದ್ದಾರೆ.
ನೂತನ ಎರಡು ಬಸ್ ಬೆಳಿಗ್ಗೆ 6.10 ಮತ್ತು 6.55ಕ್ಕೆ ಕಾಸರಗೋಡಿನಿಂದ ಸಂಚಾರ ಆರಂಭಿಸಲಿದೆ. 6.10ಕ್ಕೆ ಹೊರಡುವ ಬಸ್ 7.35ಕ್ಕೆ ಮಂಗಳೂರು ತಲುಪಲಿದೆ. ಅಲ್ಲಿಂದ 8ಕ್ಕೆ ಹೊರಟು 9.25ಕ್ಕೆ ಕಾಸರಗೋಡು ತಲುಪಲಿದೆ. ಈ ಬಸ್ 9.35ಕ್ಕೆ ಕಾಸರಗೋಡಿನಿಂದ ಹೊರಟು, 10.20ಕ್ಕೆ ಕಾಞಂಗಾಡು ತಲುಪಲಿದೆ. ಬಳಿಕ ಕಾಞಂಗಾಡಿನಿಂದ 10.50ಕ್ಕೆ ಹೊರಟು 11.35ಕ್ಕೆ ಕಾಸರಗೋಡು ತಲುಪಿ, 11.45ಕ್ಕೆ ಕಾಸರಗೋಡಿನಿಂದ ಮಂಗಳೂರಿಗೆ ಹೊರಟು 1.10ಕ್ಕೆ ಮಂಗಳೂರು ತಲುಪಲಿದೆ. ಅನಂತರ 1.40ಕ್ಕೆ ಮಂಗಳೂರಿನಿಂದ ಹೊರಟು 3.05ಕ್ಕೆ ಕಾಸರಗೋಡು ತಲುಪಲಿದ್ದು, ನಂತರ ಕಾಸರಗೋಡು ಮಂಗಳೂರು ನಡುವೆ ನಾಲ್ಕು ಟ್ರಿಪ್ ನಡೆಸಲಿದೆ. ರಾತ್ರಿ 8.15ಕ್ಕೆ ಮಂಗಳೂರಿನಿಂದ ಹೊರಟು 9.40ಕ್ಕೆ ಕಾಸರಗೋಡಿಗೆ ಕೊನೆಯ ಸರ್ವೀಸ್ ನಡೆಯಲಿದೆ.
ಇದೇ ರೀತಿ 6.55ಕ್ಕೆ ಕಾಸರಗೋಡಿನಿಂದ ಹೊರಡುವ ಇನ್ನೊಂದು ಬಸ್ 8.20ಕ್ಕೆ ಮಂಗಳೂರು ತಲುಪಲಿದೆ. 8.30ಕ್ಕೆ ಮಂಗಳೂರಿನಿಂದ ಹೊರಟು 9.55ಕ್ಕೆ ಕಾಸರಗೋಡು ತಲುಪಲಿದೆ. ನಂತರ ಕಾಸರಗೋಡಿನಿಂದ 10.25ಕ್ಕೆ ಮಂಗಳೂರಿಗೆ ಹೊರಟು 11.50ಕ್ಕೆ ತಲುಪಲಿದೆ. 12.10ಕ್ಕೆ ಮಂಗಳೂರಿನಿಂದ ಕಾಸರಗೋಡಿಗೆ ಹೊರಟು 1.25ಕ್ಕೆ ಕಾಸರಗೋಡು ತಲುಪಲಿದೆ. ಅನಂತರ 1.35ಕ್ಕೆ ಕಾಸರಗೋಡಿಂದ ಹೊರಟು 2.20ಕ್ಕೆ ಕಾಞಂಗಾಡು ತಲುಪಲಿದೆ. 3ಕ್ಕೆ ಕಾಞಂಗಾಡಿನಿಂದ ಹೊರಟು ಕಾಸರಗೋಡಿಂದ 3.45ಕ್ಕೆ ಮಂಗಳೂರಿಗೆ ಹೊರಡಲಿದೆ. ಅನಂತರ ಮಂಗಳೂರು ಕಾಸರಗೋಡು ನಡುವೆ ಮೂರು ಟ್ರಿಪ್ ನಡೆಸಲಿದೆ. ರಾತ್ರಿ 10.30ಕ್ಕೆ ಕಾಸರಗೋಡು ತಲುಪುವ ರೀತಿಯಲ್ಲಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

