ಕುಂಬಳೆ: ಭವ್ಯ ಭಾರತದ ಅಭಿವೃದ್ಧಿ ಪರ್ವದೊಂದಿಗೆ ಕೇರಳವು ಅಭಿವೃದ್ಧಿ ಹೊಂದಬೇಕು ಎಂಬ ಆಶಯದೊಂದಿಗೆ ಬಿಜೆಪಿ ರಾಜ್ಯ ಸಮಿತಿಯು ಕಾರ್ಯನಿರ್ವಹಿಸುತ್ತಿರುವ ಈ ವೇಳೆಯಲ್ಲಿ ವಿಕಸಿತ ಪುತ್ತಿಗೆ ನಮ್ಮ ಗುರಿಯಾಗಿರಬೇಕು ಎಂದು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಕಾರ್ಯಕರ್ತರಿಗೆ ಕರೆಯಿತ್ತರು.
ಅವರು ಬಿಜೆಪಿ ಪುತ್ತಿಗೆ ಹಾಗೂ ಮುಗು ವಾರ್ಡ್ ಸಮ್ಮೇಳನವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.
ಆದರ್ಶ ಕೃಷಿಕರು ಹಿರಿಯ ನೇತಾರರಾದ ಬಾಲಸುಬ್ರಮಣ್ಯ ಭಟ್ ಚಕ್ಕಣಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿಲ್ ಮಣಿಯಂಪಾರೆ ಚುನಾವಣೆಯ ಮೊದಲು ನಿರ್ವಹಿಸಬೇಕಾದ ಪ್ರಧಾನ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪುತ್ತಿಗೆ ಪಂಚಾಯತಿ ಅಧ್ಯಕ್ಷ ಪುರುಷೋತ್ತಮ ಕಲ್ಲಡ್ಕ ಶುಭಾಶಂಸನೆಗೈದರು.
ವಿಶ್ವನಾಥ ಜಿ ಪುತ್ತಿಗೆ ಸ್ವಾಗತಿಸಿ, ಬಾಲಕೃಷ್ಣ ಶೆಟ್ಟಿ ಪುತ್ತಿಗೆ ಬಯಲು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಉಮಾನಥ ಮಾಸ್ತರ್, ಜಿತೇಂದ್ರ ರೈ, ಲೋಕೇಶ್ ಕಕ್ಕೆಪಾಡಿ,ಭುಜಂಗ ಬಿ, ಸುಬ್ರಹ್ಮಣ್ಯ ಆಚಾರ್ಯ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಅನುಭವಗಳನ್ನು ಹಂಚಿಕೊಂಡರು.


