ಕಾಸರಗೋಡು: ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್‍ಶಿಪ್ ಗೆಲ್ಲುವ ಜಿಲ್ಲಾ ತಂಡಕ್ಕೆ ನೀಡಲಾಗುವ ಮುಖ್ಯಮಂತ್ರಿಗಳ ಎವರ್‍ರೋಲಿಂಗ್ ಗೋಲ್ಡ್ ಕಪ್‍ನ ಅಭಿಯಾನವು ನೀಲೇಶ್ವರಂ ಇಎಂಎಸ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿತು. ಕೇರಳದ ವಿವಿಧ ಜಿಲ್ಲೆಗಳ ಮೂಲಕ ಸಂಚರಿಸಲಿರುವ ಟ್ರೋಪಿಯ ಪ್ರಚಾರ ಅಭಿಯಾನಕ್ಕೆ ಕಾಸರಗೋಡು ಜಿಲ್ಲೆಯಿಂದ ಚಾಲನೆ ನೀಡಲಾಯಿತು.
ಇಎಂಎಸ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ. ರಾಜಗೋಪಾಲನ್ ಅವರಿಂದ ಪರೀಕ್ಷಾ ಭವನದ ಜಂಟಿ ಆಯುಕ್ತ ಡಾ. ಗಿರೀಶ್ ಚೋಳಯಿಲ್ ಅವರು ಚಿನ್ನದ ಕಪ್ ಅನ್ನು ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಟಿ.ಆರ್. ಬಿಜುರಾಜ್, ಪ್ರೀತಿ ಮೋಲ್, ಡಾ. ಕೆ. ರಘುರಾಮಭಟ್, ಅನಿಲ್ ಬಂಗಳಂ, ಡಿ.ಡಿ.ಇ. ಪಿ. ಸವಿತಾ, ಪಿ. ಮೋಹನನ್ ಉಪಸ್ಥಿತರಿದ್ದರು. ನೀಲೇಶ್ವರಂನಿಂದ ಆರಂಭಗೊಂಡ ಪ್ರಚಾರ ಜಾಥಾ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶನದ ನಂತರ ರಾಜಧಾನಿ ತಿರುವನಂತಪುರಕ್ಕೆ ತಲುಪಲಿದೆ. ಅ. 21 ರಂದು ಸಂಜೆ 4ಕ್ಕೆ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸುವರು.


