ಇಡುಕ್ಕಿ: ಕಾಡಾನೆ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ದಾಳಿ ನಡೆದಿದ್ದು ಇಡುಕ್ಕಿಯ ಚಿನ್ನಕನಾಲ್ ನಲ್ಲಿ. ಈ ಪ್ರದೇಶದಲ್ಲಿ ಕಾಡಾನೆಯೊಂದು ಬೀಡುಬಿಟ್ಟಿದೆ. ದಾಳಿಯಲ್ಲಿ ಇಡುಕ್ಕಿ ಪನ್ನಿಯಾರ್ ಮೂಲದ ಜೋಸೆಫ್ ಸಾವನ್ನಪ್ಪಿದ್ದಾರೆ.
ಜೋಸೆಫ್ ಏಲಕ್ಕಿ ತೋಟದಲ್ಲಿ ಕಾಡಾನೆಯಿಂದ ದಾಳಿಗೊಳಗಾಗಿ ಸಾವನ್ನಪ್ಪಿದರು. ಹಿಂಡಿನಲ್ಲಿ ಸುಮಾರು 14 ಆನೆಗಳು ಇದ್ದವು. ಆನೆಗಳ ಹಿಂಡು ಸ್ಥಳದಲ್ಲಿಯೇ ಇರುವುದರಿಂದ, ಶವವನ್ನು ತೆಗೆಯುವುದು ಅಸಾಧ್ಯವಾಗಿದೆ ಎಮದು ತಿಳಿದುಬಂದಿದೆ.

