ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಜಿಮೇಲ್ ಬಳಸುತ್ತಾರೆ. ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅನ್ನು ಪ್ರವೇಶಿಸಲು ಜಿಮೇಲ್ ಏಕೈಕ ಮಾರ್ಗವಾಗಿದೆ. ನಿಮ್ಮ ಜಿಮೇಲ್ ಖಾತೆ (Gmail Account) ಆಕಸ್ಮಿಕವಾಗಿ ನಿಮಗೆ ಅರಿವಿಲ್ಲದ ಡಿವೈಸ್‌ಗಳಲ್ಲಿ ಲಾಗಿನ್ ಆಗಿದ್ದರೆ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪ್ರವೇಶಿಸಬಹುದು. ನಿಮ್ಮ ಫೋನ್ ಅನ್ನು ಪ್ರವೇಶಿಸುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿಯಿಂದ ಹಿಡಿದು ಬ್ಯಾಂಕಿಂಗ್ ಅಪ್ಲಿಕೇಶನ್‌ಗಳವರೆಗೆ ನುಗ್ಗಬಹದು. ನಿಮ್ಮ ಜಿಮೇಲ್ ಖಾತೆ ಎಲ್ಲಿ ಲಾಗಿನ್ ಆಗಿದೆ ಎಂಬುದನ್ನು ನೀವು ಕಂಡುಹಿಡಿಯಬೇಕಾದರೆ ಈ ಸರಳ ವಿಧಾನಗಳು ಸಹಾಯಕವಾಗಬಹುದು.
ನಿಮ್ಮ Gmail ಖಾತೆ ಎಲ್ಲೆಲ್ಲಿ ಲಾಗಿನ್ ಆಗಿದೆ ಹೇಗೆ ತಿಳಿಯೋದು?
- ಮೊದಲು ನಿಮ್ಮ PC ಅಥವಾ ಫೋನ್ ಬ್ರೌಸರ್‌ನಲ್ಲಿ myaccount.google.com ಗೆ ಹೋಗಿ.
- ಇಲ್ಲಿ ಸೆಕ್ಯುರಿಟಿ ಆಯ್ಕೆಗೆ ಹೋಗಿ ಮತ್ತು ಕೆಳಗೆ ಸ್ಕ್ರಾಲ್ ಮಾಡಿ.
- ಇದರ ನಂತರ ಡಿವೈಸ್‌ಗಳ ಟ್ಯಾಬ್‌ಗೆ ಹೋಗಿ ಮತ್ತು ಎಲ್ಲಾ ಡಿವೈಸ್‌ಗಳನ್ನು ನಿರ್ವಹಿಸಿ ಕ್ಲಿಕ್ ಮಾಡಿ.
- ನೀವು ನಿಮ್ಮ Gmail ಗೆ ಲಾಗಿನ್ ಆಗಿರುವ ಎಲ್ಲಾ ಡಿವೈಸ್‌ಗಳನ್ನು ಇಲ್ಲಿ ನೀವು ನೋಡುತ್ತೀರಿ.
- ಈ ಪಟ್ಟಿಯಲ್ಲಿ ನಿಮ್ಮದಲ್ಲದ ಡಿವೈಸ್‌ಗಳನ್ನು ನೀವು ನೋಡಿದರೆ ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಲಾಗ್ ಔಟ್ ಮಾಡಿ.
- ಇದರ ನಂತರ ನಿಮ್ಮ Gmail ಪಾಸ್‌ವರ್ಡ್ ಅನ್ನು ಮರುಹೊಂದಿಸಿ.
ಮೊದಲು Gmail ಚಟುವಟಿಕೆಯನ್ನು ಪರಿಶೀಲಿಸಿ:
- ಇದಕ್ಕಾಗಿ ನೀವು ನಿಮ್ಮ ಪಿಸಿಯಲ್ಲಿ ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಬೇಕು.
- ನಂತರ ನೀವು Gmail ನ ಮೇಲ್ ಪಟ್ಟಿಗೆ ಹೋಗಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ವಿವರಗಳ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಒಂದು ಹೊಸ ವಿಂಡೋ ತೆರೆಯುತ್ತದೆ ಅಲ್ಲಿ ಐಪಿ ವಿಳಾಸ, ಪ್ರವೇಶ ಪ್ರಕಾರ ಇತ್ಯಾದಿ ವಿವರಗಳು ಗೋಚರಿಸುತ್ತವೆ.
- ನಿಮ್ಮ ಜಿಮೇಲ್ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ನಿಮ್ಮ ಜಿಮೇಲ್ ಪಾಸ್‌ವರ್ಡ್ ಬದಲಾಯಿಸಿ.
ನಿಮ್ಮ ಜೀಮೇಲ್ ಖಾತೆಯನ್ನು ಸುರಕ್ಷಿತಗೊಳಿಸಿ:
ಹೆಚ್ಚುವರಿಯಾಗಿ ನಿಮ್ಮ Gmail ಖಾತೆಯ ದುರುಪಯೋಗವನ್ನು ಸಹ ನೀವು ಪರಿಶೀಲಿಸಬಹುದು. ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ನಿಮ್ಮ Gmail ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ ಎಂದು ಪರಿಶೀಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲು ನಿಮ್ಮ ಪಿಸಿ ಅಥವಾ ಮೊಬೈಲ್ ಬ್ರೌಸರ್‌ಗೆ ಹೋಗಿ myaccount.google.com ತೆರೆಯಿರಿ.
- ನಂತರ ಭದ್ರತಾ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ “ಇತರ ಸೈಟ್‌ಗಳಲ್ಲಿ ಸೈನ್ ಇನ್ ಮಾಡಿ” ವಿಭಾಗಕ್ಕೆ ಸ್ಕ್ರಾಲ್ ಮಾಡಿ.
- ನಂತರ ನೀವು ಸೈನ್ ಇನ್ ವಿತ್ ಗೂಗಲ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ನೀವು Gmail ಮೂಲಕ ಲಾಗಿನ್ ಆಗಿರುವ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಇಲ್ಲಿಂದ ತೆಗೆದುಹಾಕಬಹುದು. ನೀವು ಅಂತಹ ಯಾವುದೇ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ನೋಡಿದರೆ ಅವುಗಳನ್ನು ತಕ್ಷಣವೇ ತೆಗೆದುಹಾಕಿ.

