ಕೀವ್: 'ರಷ್ಯಾದಿಂದ ನಿತ್ಯವೂ ನಡೆಯುತ್ತಿರುವ ದಾಳಿಯನ್ನು ಸಮರ್ಥವಾಗಿ ಎದುರಿಸಲು ಅಮೆರಿಕದಿಂದ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯನ್ನು ಸ್ವೀಕರಿಸಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ರಷ್ಯಾ ಡ್ರೋನ್ ದಾಳಿಯಿಂದ ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಮೃತಪಟ್ಟ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
'ಅಮೆರಿಕ ನಿರ್ಮಿತ ಪೆಟ್ರಿಯಾಟ್ ವಾಯುರಕ್ಷಣಾ ವ್ಯವಸ್ಥೆಯು ಉಕ್ರೇನ್‌ಗೆ ಸೇರ್ಪಡೆಗೊಂಡಿದೆ. ಈಗ ತನ್ನ ಕಾರ್ಯಾಚರಣೆ ಆರಂಭಿಸಿದೆ. ದೇಶದ ಮೂಲಸೌಕರ್ಯ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಇನ್ನಷ್ಟು ವ್ಯವಸ್ಥೆಗಳು ಸೇರ್ಪಡೆಗೊಳಿಸಬೇಕಾದ ಅಗತ್ಯವಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

