ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ತಂತ್ರಜ್ಞಾನ ಬಳಸಿ ಬಿಜೆಪಿ ಪ್ರಚಾರ ಆರಂಭಿಸಿದೆ.
ತಿರುವನಂತಪುರಂ ಕಾಪೆರ್Çರೇಷನ್ನಲ್ಲಿ ಬಿಜೆಪಿ ಅಭ್ಯರ್ಥಿಗಳು ಕ್ಯು.ಆರ್. ಕೋಡ್ಗಳನ್ನು ಬಳಸಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಕೊಡಂಗನೂರು ಅಭ್ಯರ್ಥಿ ವಿ.ವಿ. ರಾಜೇಶ್ ಮತ್ತು ಕವಡಿಯಾರ್ ಅಭ್ಯರ್ಥಿ ಎಸ್. ಮಧುಸೂಧನನ್ ನಾಯರ್ ಅವರ ಮತದಾರರ ಚೀಟಿಗಳು ಹೈಟೆಕ್ ಆಗಿವೆ. ಈ ಚೀಟಿಯಲ್ಲಿ ಕೆಲವು ನವೀನ ವೈಶಿಷ್ಟ್ಯಗಳಿವೆ. ತಿರುವನಂತಪುರಂ ಕಾಪೆರ್Çರೇಷನ್ನಲ್ಲಿ ಎಲ್ಲಾ ಬಿಜೆಪಿ ಅಭ್ಯರ್ಥಿಗಳ ಮತದಾರರ ಚೀಟಿಗಳನ್ನು ಈ ರೀತಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೈಟೆಕ್ ಚೀಟಿಯನ್ನು ಬಿಡುಗಡೆ ಮಾಡಿದರು. ಮತದಾರರ ಚೀಟಿಯಲ್ಲಿ ಎರಡು ಕ್ಯು.ಆರ್. ಸಂಕೇತಗಳಿವೆ. ಕಮಲದ ಚಿಹ್ನೆಯ ಕೆಳಗಿನ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, 30 ಸೆಕೆಂಡುಗಳ ಕಾಲ ಬಿಜೆಪಿಯ ಚುನಾವಣಾ ಸಂದೇಶವನ್ನು ನೋಡುತ್ತೀರಿ. ನೀವು ಅದರ ಪಕ್ಕದಲ್ಲಿರುವ ಕ್ಯು.ಆರ್. ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಮತಗಟ್ಟೆಯ ಗೂಗಲ್ ಮ್ಯಾಫ್ ಲಭಿಸುತ್ತದೆ.
ಕೊಡಂಗನೂರಿನ ಬಿಜೆಪಿ ಅಭ್ಯರ್ಥಿ ವಿ.ವಿ. ರಾಜೇಶ್ ಮಾತನಾಡಿ, ಬಿಜೆಪಿಗೆ ಕಾಪೆರ್Çರೇಷನ್ ಆಡಳಿತ ಸಿಕ್ಕರೆ, ಜಗತ್ತಿನಲ್ಲಿರುವ ಎಲ್ಲಾ ತಂತ್ರಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಿಜೆಪಿ ಬಳಸುತ್ತದೆ ಮತ್ತು ಇದು ಅದರ ಆರಂಭವಾಗಿದೆ. ಇದನ್ನು ಅಭಿವೃದ್ಧಿಯತ್ತ ಒಂದು ಬೋಡಿರ್ಂಗ್ ಪಾಸ್ ಎಂದು ಕಾಣಬಹುದು. ತಂತ್ರಜ್ಞಾನದ ಪ್ರಗತಿಯ ಹೊರತಾಗಿಯೂ, ಕಸದ ಸಮಸ್ಯೆಯನ್ನು ಹಂದಿಗಳಿಗೆ ನೀಡುವ ಮೂಲಕ ಪರಿಹರಿಸಲಾಗುವುದು ಎಂದು ಸಿಪಿಎಂ ಮೇಯರ್ ಹೇಳುತ್ತಾರೆ. ಆದಾಗ್ಯೂ, ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕ ಕಸ ನಿರ್ವಹಣೆಯನ್ನು ಜಾರಿಗೆ ತರಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದು ವಿ.ವಿ. ರಾಜೇಶ್ ಹೇಳಿದರು.

