ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇಗುಲದ ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಂಟಾರು ಮಂತ್ರಶಾಲೆಯ ನಿರ್ಮಾಣದ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಇತ್ತೀಚೆಗೆ ನಡೆಯಿತು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿ ಅವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ದೇಗುಲ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂತ್ರಶಾಲೆ ನಿರ್ಮಾಣ ಸಮಿತಿ ಕಾರ್ಯದರ್ಶಿ ಸುಬ್ಬಯ್ಯ ಮಣಿಯಾಣಿ, ಕೋಶಾಧಿಕಾರಿ ಜಗದೀಶ್ ಮಾಸ್ತರ್, ಕುಂಟಾರು ಅಯ್ಯಪ್ಪ ಮಂದಿರ ಸಮಿತಿ ಅಧ್ಯಕ್ಷ. ಗಣೇಶ.ಕೆ, ಗಾಳಿಮುಖ ಅಯ್ಯಪ್ಪ ಮಂದಿರ ಗುರುಸ್ವಾಮಿ ಶಶಿಧರ.ಕೆ.ವಿ, ಕೃಷ್ಣ ಕುಂಟಾರು, ಬಾಲಕೃಷ್ಣ ಭಟ್, ಸತ್ಯನಾರಾಯಣ, ಶ್ರೀವಿದ್ಯಾ, ದೇಗುಲ ಸಮಿತಿ ಕೋಶಾಧಿಕಾರಿ ಲತೀಶ, ರೋಹಿತಾಶ್ವ, ಕಾರ್ಯದರ್ಶಿ ಪ್ರಕಾಶ್ ಉಪ್ಥಿತರಿದ್ದರು.

.jpg)
