ನವದೆಹಲಿ: 'ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದರೆ ಮಾತ್ರವೇ ಸುಪ್ರೀಂ ಕೋರ್ಟ್ ಆರ್ಥಿಕ ವಿಷಯಗಳಿಗೆ ಸಂಬಂಧಿಸಿ ಮಧ್ಯ ಪ್ರವೇಶಿಸುತ್ತದೆಯಷ್ಟೆ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅಭಿಪ್ರಾಯಪಟ್ಟರು.
ವಾಣಿಜ್ಯ ನ್ಯಾಯಾಲಯಗಳ ಅಂತರರಾಷ್ಟ್ರೀಯ ಫೋರಂನ 6ನೇ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.
'ಲಾಭಕ್ಕಾಗಿ ಕಾನೂನನ್ನು ತಪ್ಪಾಗಿ ಬಳಸಿಕೊಳ್ಳುವ ಯತ್ನವನ್ನು ನ್ಯಾಯಾಲಯ ತಿರಸ್ಕರಿಸುತ್ತದೆ' ಎಂದರು.
'ನ್ಯಾಯಯುತವಾದ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಚಾರವು ಮುಖ್ಯವಾಗಿದ್ದು, ಕಾನೂನಿನ ವಿಷಯದಲ್ಲಿ ಸಮಸ್ಯೆಗಳಿದ್ದರೆ ಮಾತ್ರವೇ ಸುಪ್ರೀಂ ಕೋರ್ಟ್ ಆರ್ಥಿಕ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುತ್ತದೆ. ತೆರಿಗೆ ವಿಚಾರಗಳಲ್ಲಿ ಸರ್ಕಾರದ ಅಧಿಕಾರವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಆ ಅಧಿಕಾರವು ಸಂವಿಧಾನದ ಚೌಕಟ್ಟನ್ನು ಮೀರಬಾರದು' ಎಂದರು.

