ಗಡಿಚಿರೋಲಿ: ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಹಿರಿಯ ನಕ್ಸಲರು ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ.
ಇವರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹82 ಲಕ್ಷ ಬಹುಮಾನ ಈ ಹಿಂದೆ ಘೋಷಣೆಯಾಗಿತ್ತು.
'ನಕ್ಸಲ್ ಚಟುವಟಿಕೆ ಅವನತಿಯ ಹಂತಕ್ಕೆ ತಲುಪಿದೆ. ಗಡಿಚಿರೋಲಿಯಲ್ಲಿ 10ರಿಂದ 11 ನಕ್ಸಲರಷ್ಟೆ ಸಕ್ರಿಯರಾಗಿರಬಹುದು.
2026ರ ಮಾರ್ಚ್ 31ರೊಳಗೆ ಮಹಾರಾಷ್ಟ್ರವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ತಲುಪಲಿದ್ದೇವೆ' ಎಂದು ಡಿಜಿಪಿ ರಶ್ಮಿ ಶುಕ್ಲಾ ತಿಳಿಸಿದರು.
'ಗಡಿಚಿರೋಲಿಯಲ್ಲಿ ಈ ವರ್ಷ 100ಕ್ಕೂ ಅಧಿಕ ನಕ್ಸಲರು ಶರಣಾಗಿದ್ದಾರೆ' ಎಂದು ತಿಳಿಸಿದ್ದಾರೆ.

