HEALTH TIPS

ಡಿ. 20 ರಂದು ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವದ ಮೂರನೇ ಆವೃತ್ತಿಗೆ ಚಾಲನೆ: ಹನ್ನೆರಡು ದಿನಗಳ ಬೇಕಲ್ ಕರಾವಳಿ ಉತ್ಸವ

ಕಾಸರಗೋಡು: ಜಿಲ್ಲೆ ಕಂಡ ಅತಿದೊಡ್ಡ ಕರಾವಳಿ ಉತ್ಸವ ಕಾರ್ಯಕ್ರಮವಾಗಿ ಮಾರ್ಪಟ್ಟಿರುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವದ ಮೂರನೇ ಆವೃತ್ತಿ ಡಿ. 20ರಂದು ಆರಂಭಗೊಂಡು 31ರ ವರೆಗೆ ಬೇಕಲದ ಪಳ್ಳಿಕೆರೆ ಬೀಚ್‍ಪಾರ್ಕ್‍ನಲ್ಲಿ ನಡೆಯಲಿದೆ. ಡಿ. 20ರಂದು ರಾಜ್ಯ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ಚಾಲನೆ ನೀಡುವರು ಎಂದು ಉತ್ಸವ ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್ ಕುಞಂಬು ಸುದ್ದಿಗೋಷ್ಠಿಯಲ್ಲಿ  ತಿಳಿಸಿದ್ದಾರೆ. 

ಭಾರತೀಯ ಚಲನಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ, ಬೇಕಲ ಕೋಟೆಯನ್ನು ಕೇಂದ್ರೀಕರಿಸಿ ಚಿತ್ರೀಕರಿಸಲಾದ'ಬಾಂಬೆ'ಚಿತ್ರದ ನಿರ್ಮಾಪಕ, ದಕ್ಷಿಣ ಭಾರತದ ಪ್ರಮುಖ ಚಲನಚಿತ್ರ ನಿರ್ಮಾಪಕ ಮಣಿರತ್ನಂ, ಚಲನಚಿತ್ರ ತಾರೆ ಮನೀಷಾ ಕೊಯಿರಾಲ, ಬಾಂಬೆ ಸಿನಿಮಾದ ಛಾಯಾಗ್ರಾಹಕ ರಾಜೀವ್ ಮೆನನ್, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಾಂಸ್ಕøತಿಕ ಕಾರ್ಯಕರ್ತರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.  ಇದೇ ಸಂದರ್ಭ ಬಾಂಬೆ ಸಿನಿಮಾ ಬಿಡುಗಡೆಗೊಂಡ 30 ನೇ ವಾರ್ಷಿಕೋತ್ಸವವನ್ನು ಸಮಗ್ರ ಚಿತ್ರ ತಂಡ ಬೇಕಲ್ ಫೆಸ್ಟ್ ಸಂದರ್ಭ ಆಚರಿಸಿಕೊಳ್ಳಲಿದೆ. ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ವಿವಿಧ ದಿನಗಳಲ್ಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರತಿದಿನ, ಪ್ರಮುಖ ಸಂಗೀತ ಕಲಾವಿದರ ತಂಡಗಳಿಂದ ಸಂಗೀತ ಮತ್ತು ದೃಶ್ಯ ಕಾರ್ಯಕ್ರಮ ಮುಖ್ಯ ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು. ಪ್ರತಿದಿನ ಕಲಾ ಕಾರ್ಯಕ್ರಮಗಳ ಮೊದಲು ಸಾಂಸ್ಕøತಿಕ ಸಂಜೆ, ವಿವಿಧ ವಿಷಯಗಳ ಕುರಿತು ಉಪನ್ಯಾಸ ಆಯೋಜಿಸಲಾಗುವುದು.

ಪೆÇಲೀಸ್, ಅಗ್ನಿಶಾಮಕ ಮತ್ತು ಸುರಕ್ಷತೆ, ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ಸ್ಥಳೀಯ ಕಲಾ ಸಮಿತಿಗಳು ಮತ್ತು ಕ್ಲಬ್‍ಗಳ ಸೇವೆ ಬಳಸಿಕೊಳ್ಳಲಾಗುವುದು. ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿರುವ ಈ ಕಾರ್ಯಕ್ರಮಕ್ಕೆ ವಾಹನದ ಮೂಲಕ ಆಗಮಿಸುವವರಿಗೆ ಹೆಚ್ಚುವರಿ ಪಾಕಿರ್ಂಗ್ ಸೌಲಭ್ಯ ಕಲ್ಪಿಸಲಾಗುವುದು.  ಬೀಚ್ ಫೆಸ್ಟ್‍ನ ಸಮಾರೋಪ ದಿನವಾದ ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಲು ಆಯೋಜಿಸಲಾದ ಡಿಜಿಟಲ್ ಪಟಾಕಿ ಪ್ರದರ್ಶನವನ್ನೂ ಆಯೋಜಿಸಲಾಗುವುದು. 

ಡಿಸೆಂಬರ್‍ನಲ್ಲಿ ಕ್ರಿಸ್‍ಮಸ್ ರಜಾದಿನಗಳಲ್ಲಿ ಬೇಕಲ್ ಬೀಚ್ ಉತ್ಸವದಲ್ಲಿ ಆಯೋಜಿಸಲಾಗುತ್ತಿದ್ದು,  ಇದು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಬೇಕಲ್ ಬೀಚ್‍ಫೆಸ್ಟ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಬೇಕಲ ಸುಪಾಸಿನ ಪ್ರವಾಸಿತಾಣಗಳ ಅಭಿವೃದ್ಧಿಗೂ ಪ್ರಚೋದನೆ ನೀಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿರುವ ರೆಸಾರ್ಟ್‍ಗಳ ಜೊತೆಗೆ, ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಆಸಕ್ತಿಯೊಂದಿಗೆ ಹೆಚ್ಚಿನ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಆರ್ ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪಿ, ಹಕೀಂ ಕುನ್ನಿಲ್, ವಿ.ರಾಜನ್, ಕೆ.ಇ.ಎ. ಬಕ್ಕರ್, ಎಂ.ಎ.ಲತೀಫ್, ಶೈನಿಮೋಳ್ ಉಪಸ್ಥಿತರರಿದ್ದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries