HEALTH TIPS

ಡಾ. ಸುಭಾಷ್ ಪಟ್ಟಾಜೆಯವರ ಎರಡು ಕೃತಿಗಳ ಬಿಡುಗಡೆ 26 ರಂದು

ಬದಿಯಡ್ಕ: ಕಾಸರಗೋಡಿನ ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರ ಕಾಡು ಸಂಪಿಗೆ (ಕಥಾ ಸಂಕಲನ) ಮತ್ತು ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ-ಸಾಹಿತ್ಯ (ಮೊನೋಗ್ರಾಫ್)  ಡಿ. 26 ರಂದು ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಧಾರವಾಡ)ದಲ್ಲಿ  ಬಿಡುಗಡೆಯಾಗಲಿವೆ. 


ಕನ್ನಡದ ಹಿರಿಯ ಲೇಖಕಿ ಮಾಲತಿ ಪಟ್ಟಶೆಟ್ಟಿಯವರ ಕಣ್ಣಂಚಿನ ತಾರೆ (ಸಮಗ್ರ ಕಥೆಗಳು) ಮತ್ತು ವಿಕಾಸ ಹೊಸಮನಿಯವರ ಜೀವ ಸಂವಾದ (ಕಾದಂಬರಿ ಸಮೀಕ್ಷೆ) ಕೂಡ ಅನಾವರಣಗೊಳ್ಳಲಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಪ್ರೊ0. ರಾಘವೇಂದ್ರ ಪಾಟೀಲ ಪುಸ್ತಕಗಳನ್ನು ಬಿಡುಗಡೆಗೊಳಿಸಲಿರುವರು. ಪ್ರೊ. ಅರುಂಧತಿ ಸವದತ್ತಿ, ಡಾ. ಅನಿತಾ ಗುಡಿ, ಲಿಂಗರಾಜ ಸೊಟ್ಟಪ್ಪನವರ್ ಕೃತಿ ವಿಮರ್ಶೆ ಮಾಡಲಿದ್ದಾರೆ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಲಿರುವರು. ಪ್ರೊ. ಸೀಮಾ ಕುಲಕರ್ಣಿ, ವಿಕಾಸ ಹೊಸಮನಿ ವೇದಿಕೆಯಲ್ಲಿ ಉಪಸ್ಥಿತರಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries