ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಲಕ್ಷಾರ್ಚನೆ ಸೇವೆ ಡಿ.31 ರಂದು ಬುಧವಾರ ಜರಗಲಿರುವುದು. ಮಧ್ಯಾಹ್ನ 11.15 ರಿಂದ 12.15ರ ತನಕ ಕು. ರಕ್ಷಾ ಸರ್ಪಂಗಳ ಮತ್ತು ತಂಡದವರಿಂದ ಭಕ್ತಿಗಾನ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು. ಭಗವದ್ಭಕ್ತರು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸೇವಾಕರ್ತರಾದ ಕಿಳಿಂಗಾರು ಬಾಲಕೃಷ್ಣ ಪ್ರಸಾದ್ ಮತ್ತು ಮನೆಯವರು ಏಣಿಯರ್ಪು ನೀರ್ಚಾಲು ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

