HEALTH TIPS

ಬದಿಯಡ್ಕದಲ್ಲಿ ಅರಳಿದ ಕಮಲ: ಒಲಿದ ಬಂದ ಚುಕ್ಕಾಣಿ

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸಮಬಲ ದಾಖಲಿಸಿದ್ದ ಬದಿಯಡ್ಕ ಗ್ರಾ.ಪಂ. ಆಡಳಿತ ಚುಕ್ಕಾಣಿಗೆ ಇಂದು ನಡೆದ ಚೀಟಿ ಎತ್ತಿ ಅದೃಷ್ಟ ಪರೀಕ್ಷಿಸುವಲ್ಲಿ ಬಿಜೆಪಿಗೆ ಆಡಳಿತ ಹಕ್ಕು ಅಯಾಚಿತವಾಗಿ ಒದಗಿಬಂದಿದೆ.

21 ಸದಸ್ಯ ಬಲದ ಪಂ.ನಲ್ಲಿ ಬಿಜೆಪಿ 10, ಯುಡಿಎಫ್ 10 ಹಾಗೂ ಸಿಪಿಎಂ 1 ಸ್ಥಾನ ಪಡೆದಿತ್ತು. ಪಂ.ಆಡಳಿತ ಗದ್ದುಗೆಗೇರಲು 11 ಸ್ಥಾನಗಳ ಕನಿಷ್ಠ ಬಹುಮತದ ಹಿನ್ನೆಲೆಯಲ್ಲಿ ಯಾರು ಆಡಳಿತ ನಡೆಸುವುದೆನ್ನುವುದು ಕಗ್ಗಂಟಾಗಿತ್ತು.ಏಕ ಸಿಪಿಎಂ ಸದಸ್ಯೆ ತಟಸ್ಥ ನಿಲುವು ತಳೆಯುವ ಇಂಗಿತ ವ್ಯಕ್ತಪಡಿಸಿದ್ದರು.  ಈ ಹಿನ್ನೆಲೆಯಲ್ಲಿ ಚೀಟಿ ಎತ್ತಿ ಅದೃಷ್ ಪರೀಕ್ಷಿಸುವುದೊಂದೇ ಮಾರ್ಗವಾಗಿತ್ತು.
ಇಂದು ಬೆಳಿಗ್ಗೆ ಪಂ. ಆವರಣದಲ್ಲಿ ನಡೆದ ಕುತೂಹಲ ಡ್ರಾ ನಿರ್ಣಯದಲ್ಲಿ ಕೊನೆಗೂ ಬಿಜೆಪಿ ಪಾಲಿಗೆ ಅದೃಷ್ಟ ಲಕ್ಷ್ಮಿ ಒಲಿದಿರುವಳು. ಬಿಜೆಪಿ ಹಿರಿಯ ಸದಸ್ಯ ಶಂಕರ ಡಿ. ಪಂ.ಅಧ್ಯಕ್ಷರಾಗಿ ಆಯ್ಕೆಯಾದರು. ಅಪರಾಹ್ನ ಉಪಾಧ್ಯಕ್ಷ ಹುದ್ದೆಗೆ ಪ್ರಕ್ರಿಯೆ ನಡೆಯಲಿದೆ.
ದಶಕಗಳ ಬಳಿಕದ ಗೆಲುವು:
ಬಿಜೆಪಿ ಕಳೆದ ಒಂದೂವರೆ- ಎರಡು ದಶಕಗಳಿಂದ ಬದಿಯಡ್ಕದಲ್ಲಿ ಬಲಗೊಳ್ಳುತ್ತಿರುವ ಪಕ್ಷವಾಗಿದೆ. ಕಳೆದ ಬಾರಿಯೂ ಬಿಜೆಪಿ ಹಾಗೂ ಯುಡಿಎಫ್ ಸಮಬಲ ಸಾಧಿಸಿ ಡ್ರಾದಲ್ಲಿ ಅಧಿಕಾರ ಕಳೆದುಕೊಂಡಿತ್ತು.
ಈ ಬಾರಿ ಆರಂಭದಲ್ಲೇ ಅಧಿಕಾರ ಚುಕ್ಕಾಣಿಯ ಭರವಸೆಯಲ್ಲಿ ಬಿಜೆಪಿ ಕಾರ್ಯಾಚರಿಸಿತ್ತು. ವಾರ್ಡ್ ಮಟ್ಟದ ಅಭಿಯಾನಗಳು, ಜನರ ಬಳಿಗೆ ತೆರಳಿ ಕೇಂದ್ರದ ಜನಪರ ಯೋಜನೆಗಳ ಹಿರಿಮೆಯ ಬಗ್ಗೆ ಜಾಗೃತಿ, ವಲಯ ಮಟ್ಟದಲ್ಲಿ ಕಾರ್ಯಕರ್ತರ ಶ್ರಮ ಗಮನಾರ್ವಾಗಿತ್ತು. ಆದರೆ ಪಕ್ಷ ಗೆಲುವಿನ ಸಾಧ್ಯತೆಯಿದ್ದ ಎರಡು ವಾರ್ಡ್ ಗಳಲ್ಲಿ ಅಂದಾಜನ್ನು ಮೀರಿ ಪರಾಭವಗೊಂಡದ್ದು ಬಹುಮತದ ಕೊರತೆಗೆ ಕಾರಣವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries