HEALTH TIPS

ಭಾರತದಲ್ಲಿ ಹೆಚ್ಚುತ್ತಿದೆ ಎಐ ಒತ್ತಡ; ಕೆಲಸವನ್ನು ಆರಂಭಿಸುವುದಕ್ಕೂ ಮುನ್ನ ಉದ್ಯೋಗಿಗಳು ದಣಿಯುತ್ತಿರುವುದೇಕೆ?

ಇಂದು ಎಲ್ಲಾ ಕ್ಷೇತ್ರಗಳಲ್ಲಿ ಎಐ (AI) ವಿಸ್ತಾರವಾಗಿ ತನ್ನ ಜಾಲವನ್ನು ಹರಡುತ್ತಿದೆ ಅದರಲ್ಲೂ ಎಐ ಇಂದು ಉದ್ಯೋಗಿಗಳ ಕೆಲಸದ (Job) ಮೇಲೂ ತನ್ನ ಹಸ್ತಕ್ಷೇಪ ಮಾಡುತ್ತಿದೆ. ಇದು ಉಪಕರಣ ಕೆಲಸವನ್ನು ಸುಲಭಗೊಳಿಸುತ್ತಿದೆಯಾದರೂ ಇದಕ್ಕೆ ನಿರಂತರವಾಗಿ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಅವರು ಮಾನಸಿಕ ಹಾಗೂ ಅರಿವಿನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಅವರಿಗೆ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಂಕೀರ್ಣವಾಗುತ್ತಿದೆ.

ಕೆಲಸವನ್ನು ಸುಲಭಗೊಳಿಸಲು, ವೈವಿಧ್ಯಮಯಗೊಳಿಸಲು ಕಾರ್ಯಗತಗೊಳಿಸಲಾದ ಎಐ ಉಪಕರಣ ಇಂದು ಉದ್ಯೋಗಿಗಳಲ್ಲಿ ಸವಾಲನ್ನುಂಟು ಮಾಡಲು ಕಾರಣವಾಗುತ್ತಿದೆ. ಐಟಿ, ಹಣಕಾಸು, ಗ್ರಾಹಕ ಬೆಂಬಲ, ಮಾಧ್ಯಮ, ಸಲಹಾ ಮತ್ತು ಸರ್ಕಾರಿ ಬೆಂಬಲಿತ ಯೋಜನೆಗಳಲ್ಲಿನ ಉದ್ಯೋಗಿಗಳು ಇದರಿಂದ ಉಂಟಾಗುತ್ತಿರುವ ಹೊಸ ಬಗೆಯ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಯಂತ್ರವು ಅವರ ಕೆಲಸವನ್ನು ಬದಲಾಯಿಸುವುದು ಅವರ ಮೇಲೆ ಪರಿಣಾಮ ಬೀರುತ್ತಿಲ್ಲ ಬದಲಿಗೆ ಈ ಯಾಂತ್ರೀಕರಣದೊಂದಿಗೆ ತಮ್ಮ ಕೆಲಸವನ್ನು ಮಾಡಿಕೊಳ್ಳುವುದು ಹೆಚ್ಚಿನ ಒತ್ತಡ ಹಾಗೂ ಆಯಾಸಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ. ಎಐ ಮಾಡುವ ತಪ್ಪುಗಳಾಗಿರಬಹುದು, ಔಟ್‌ಪುಟ್‌ಗಳನ್ನು ಮರು ಫಾರ್ಮ್ಯಾಟ್ ಮಾಡುವುದು, ಬಹು ಇಂಟರ್ಫೇಸ್‌ಗಳ ನಡುವೆ ಬದಲಾಯಿಸುವುದು ಹಾಗೂ ಪ್ರಾಯೋಗಿಕ ನೆಲೆಯಲ್ಲಿರುವಾಗಲೇ ಸಿಸ್ಟಮ್‌ಗಳನ್ನು ಮೇಲ್ವಿಚಾರಣೆ ಮಾಡುವ ಕೆಲಸಗಳು ತುಂಬಾ ಶ್ರಮದಾಯಕ ಎಂದು ಉದ್ಯೋಗಿಗಳು ಅಲವತ್ತುಕೊಳ್ಳುತ್ತಿದ್ದಾರೆ.

ಭಾರತದ ಡಿಜಿಟಲೀಕರಣಗೊಂಡ ಕಚೇರಿ ಪರಿಸರಗಳಲ್ಲಿ AI ವ್ಯವಸ್ಥೆಗಳು ಸ್ಥಿರಗೊಳ್ಳುತ್ತಿದ್ದು ಕೆಲಸದ ಹರಿವಿನೊಂದಿಗೆ ಇದು ಸಂಘರ್ಷವನ್ನುಂಟು ಮಾಡುತ್ತಿದೆ ಎಂದಿದ್ದಾರೆ. ತಮ್ಮ ಅರಿವನ್ನು ಬಳಸುವುದಕ್ಕೆ ಇಲ್ಲಿ ಉದ್ಯೋಗಿಗಳಿಗೆ ಅವಕಾಶ ಸಿಗುತ್ತಿಲ್ಲ ಬದಲಿಗೆ ಎಐ ದೋಷಗಳನ್ನು ಸರಿಪಡಿಸಲು ಅದನ್ನು ವ್ಯವಸ್ಥಿತ ರೂಪದಲ್ಲಿ ಕಾರ್ಯರೂಪಕ್ಕೆ ತರುವುದೇ ಕೆಲಸವಾಗಿದೆ ಇದರಿಂದ ಕೆಲಸದ ಅವಧಿ, ಹೊರೆ ಹೆಚ್ಚುತ್ತಿದೆ ಎನ್ನುತ್ತಿದ್ದಾರೆ.

ಎಐ ಆಯಾಸ ಇದೀಗ ಭಾರತದಲ್ಲಿ ಕಂಡುಬರುತ್ತಿದೆ ಏಕೆ?

ಭಾರತ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ತನ್ನ ಕಚೇರಿ ವ್ಯವಸ್ಥೆಗಳಲ್ಲಿ ಎಐ ಅಳವಡಿಕೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ಸ್ಟಾರ್ಟ್-ಅಪ್, ಔಟ್‌ಸೋರ್ಸಿಂಗ್ ಕಂಪನಿಗಳು, ಐಟಿ ಕಂಪನಿಗಳು, ಫಿನ್‌ಟೆಕ್ ಫರ್ಮ್‌ಗಳು, ಮಾಧ್ಯಮ ಸಂಸ್ಥೆಗಳು ಕೂಡ AI ಮತ್ತು ಯಾಂತ್ರೀಕರಣವನ್ನು ದೈನಂದಿನ ಪ್ರಕ್ರಿಯೆಗಳಲ್ಲಿ ಸಂಯೋಜಿಸಲು ಸ್ಪರ್ಧಿಸುತ್ತಿವೆ. ಆದರೆ ಇದಕ್ಕೆ ಬೇಕಾದ ಸಿದ್ಧತೆ ಮಾತ್ರ ಕುಂಠುತ್ತಿದೆ.

ಉದ್ಯೋಗ ಪಾತ್ರಗಳನ್ನು ಮರುವಿನ್ಯಾಸಗೊಳಿಸಿಲ್ಲ, ತರಬೇತಿ ಕಡಿಮೆ ಉಳಿದಿದೆ. ಮತ್ತು ಹೈಬ್ರಿಡ್ ಮಾನವ-AI ಸಹಯೋಗವನ್ನು ಬೆಂಬಲಿಸಲು ಹೆಚ್ಚಿನ ಕೆಲಸದ ಪರಿಸರಗಳನ್ನು ಪುನರ್‌ ರಚಿಸಲಾಗಿಲ್ಲ.

ಹೀಗಾಗಿ ಪರಿಕರಗಳು ವಾರಕ್ಕೊಮ್ಮೆ ಬದಲಾದರೂ, ಇಂಟರ್ಫೇಸ್‌ಗಳು ಮಾರ್ಪಾಡುಗೊಂಡರೂ ಇದರ ಪ್ರಭಾವ ಇದಕ್ಕೆ ಒಗ್ಗಿಕೊಳ್ಳಲು ಕಷ್ಟಪಡುತ್ತಿರುವ ಉದ್ಯೋಗಿಗಳ ಮೇಲಾಗುತ್ತಿದೆ.

ಬೆಂಗಳೂರು, ಹೈದರಾಬಾದ್, ಪುಣೆ, ಚೆನ್ನೈ, ನೋಯ್ಡಾ ಮತ್ತು ಗುರುಗ್ರಾಮ್‌ಗಳ ಎಚ್‌ಆರ್ ಟೀಮ್‌ಗಳು ಅತಿಯಾದ ಹೊರೆ, ಎಐನೊಂದಿಗೆ ಅತಿಯಾದ ಕೆಲಸ ಹಾಗೂ ಅರಿವಿನ ಆಯಾಸದ ಬಗ್ಗೆ ಸತತವಾಗಿ ದೂರುಗಳನ್ನು ವರದಿ ಮಾಡುತ್ತಿದ್ದಾರೆ.

ಸಿಸ್ಟಮ್ಸ್ ಹಾಗೂ ಮಾನವರು ಇಬ್ಬರ ನಡುವೆ ಕೆಲಸ ಮಾಡಬೇಕಾದ ಹೊಸ ಒತ್ತಡದ ಬಗ್ಗೆ ಅವರು ವಿವರಿಸಿದ್ದು, ಅರ್ಧ ಯಂತ್ರ ಅರ್ಧ ಮಾನವ ಎರಡೂ ಕಡೆ ವಿಶ್ವಾಸಾರ್ಹವಾಗಿ ಕೆಲಸ ಮಾಡಬೇಕಾದುದು ಹೊಸ ಚಾಲೆಂಜ್ ಎಂದಿದ್ದಾರೆ.

ಮುಂಬೈ ಮೂಲದ ಡೇಟಾ ಅನಾಲಿಟಿಕ್ಸ್ ಸಂಸ್ಥೆಯ ಸಿಇಒ ಶೈಲೇಶ್ ಧುರಿ ಹೇಳುವಂತೆ ಸಂಸ್ಥೆಗಳು ಎಐ ಅನ್ನು ಒಂದು ಪ್ರಿನ್ಸಿಪಲ್‌ನಂತೆ ಅದನ್ನೊಂದು ಗುರುತಿನಂತೆ ಅಳವಡಿಸಿದಾಗ ಎಐ ಆಯಾಸಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ.

ಎಐ ತಪ್ಪುಗಳ ಸರಿಪಡಿಸುವಿಕೆ, ಮೇಲ್ವಿಚಾರಣೆ ಮಾಡುವುದು, ಸಂರಕ್ಷಣೆ ಹೀಗಾದಲ್ಲಿ ಅದು ಗಮನದ ಕೊರತೆಗೆ ಕಾರಣವಾಗಬಹುದು, ಜಾಗರೂಕತೆ ಕಡಿಮೆಯಾಗಬಹುದು ತಂಡಗಳು ಅವುಗಳನ್ನು ಬೆಂಬಲಿಸಲು ಉದ್ದೇಶಿಸಲಾದ ವ್ಯವಸ್ಥೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತವೆ.

ಇಲ್ಲಿ ಉತ್ಪಾದಕತೆ ಕಡಿಮೆಯಾಗುವುದಿಲ್ಲ ಬದಲಾಗಿ ಅದು ನಾಶವೇ ಆಗಿಬಿಡುತ್ತದೆ ಎಂದು ಎಚ್ಚರಿಸಿದ್ದಾರೆ.

AI ಕೆಲಸ ಕಡಿಮೆ ಮಾಡುವ ಬದಲು ಹೆಚ್ಚಿನ ಕೆಲಸಕ್ಕೆ ಕಾರಣವಾಗುತ್ತಿದೆ

ಎಐ ಬರ್ನೌಔಟ್ ಅನ್ನು ಉಂಟುಮಾಡುತ್ತಿದೆ ಹಾಗೂ ಎಐ ಓವರ್‌ಹೆಡ್ ಎಂದು ಸಂಶೋಕರು ಇದನ್ನು ಕರೆದಿದ್ದು, ಉದ್ಯೋಗಿಗಳು ತಾವು ಇದುವರೆಗೆ ಮಾಡದೇ ಇರುವ ಕೆಲಸಗಳನ್ನು ಮಾಡುತ್ತಿದ್ದಾರೆ.

ಇದಕ್ಕಾಗಿ ಸರಿಯಾದ ತರಬೇತಿಗಳಿಲ್ಲ, ಪರಿಶೀಲಿಸುವ, ಸರಿಪಡಿಸುವ, ಪರಿಶೀಲಿಸುವ ಪುನರ್‌ರಚಿಸುವ ಕೆಲಸಗಳು ಅತಿಯಾದ ಒತ್ತಡವನ್ನುಂಟು ಮಾಡುತ್ತಿವೆ ಎಂದಿದ್ದಾರೆ.

ಉದಾಹರಣೆಗೆ ಎಐ ಕಂಟೆಂಟ್ ಕ್ರಿಯೇಟರ್‌ಗಳ 20 ನಿಮಿಷಗಳ ಸಮಯವನ್ನು ಉಳಿಸಿದರೂ, ಇನ್ನೊಂದು 45 ನಿಮಿಷಗಳು ಅದರ ತಪ್ಪುಗಳನ್ನು ಸರಿಪಡಿಸಲು, ಫಾರ್ಮ್ಯಾಟ್‌ಗಳನ್ನು ಸರಿಹೊಂದಿಸಲು, ಪ್ಯಾರಾ ಸೇರಿಸಲು ಹೀಗೆ ವಿನಿಯೋಗವಾಗುತ್ತದೆ.

ಪರಿಕರಗಳು ಅಪೂರ್ಣವಾಗಿದ್ದರೂ ಸಹ, ನಿರೀಕ್ಷೆಗಳು ಹೆಚ್ಚುತ್ತಿರುವ ವಾತಾವರಣದಲ್ಲಿ ಸ್ವಯಂ-ಅನುಮಾನವು ಒತ್ತಡದ ಮತ್ತೊಂದು ಪದರವಾಗುತ್ತದೆ.

ಕಂಪನಿಗಳು ಏನು ಮಾಡಬೇಕು

ತಮ್ಮ ಉದ್ಯೋಗಿಗಳಿಗೆ ಅತಿಯಾದ ಒತ್ತಡ ನೀಡದೆ AI ಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಯಸುವ ಸಂಸ್ಥೆಗಳು ತಮ್ಮ ವಿಧಾನವನ್ನು ಪುನರ್ವಿಮರ್ಶಿಸಬೇಕು.

ಮೊದಲನೆಯದಾಗಿ, ಕಂಪನಿಗಳು ಅಸ್ತಿತ್ವದಲ್ಲಿರುವ ಪ್ರಕ್ರಿಯೆಗಳಲ್ಲಿ ಪರಿಕರಗಳನ್ನು ಸೇರಿಸುವ ಬದಲು, AI ಸುತ್ತಲಿನ ಕೆಲಸದ ಹರಿವುಗಳನ್ನು ಮರುವಿನ್ಯಾಸಗೊಳಿಸಬೇಕಾಗಿದೆ.

ಇದಕ್ಕೆ ಕಾರ್ಯಗಳನ್ನು ಕೊನೆಯಿಂದ ಕೊನೆಯವರೆಗೆ ಮ್ಯಾಪಿಂಗ್ ಮಾಡುವುದು ಮತ್ತು AI ಯಾವ ಭಾಗಗಳನ್ನು ವಾಸ್ತವಿಕವಾಗಿ ನಿರ್ವಹಿಸಬಹುದು ಎಂಬುದನ್ನು ಗುರುತಿಸುವುದು ಅಗತ್ಯವಾಗಿರುತ್ತದೆ.

ತರಬೇತಿ ಮುಖ್ಯವಾಗಿದ್ದು AI ಅನ್ನು ಯಾವಾಗ ಬಳಸಬೇಕು, ಅದನ್ನು ಎಷ್ಟು ನಂಬಬೇಕು, ಔಟ್‌ಪುಟ್‌ಗಳನ್ನು ಹೇಗೆ ಪರಿಣಾಮಕಾರಿಯಾಗಿ ಪರಿಶೀಲಿಸಬೇಕು ಮತ್ತು ಅತಿಯಾಗಿ ಅವಲಂಬಿತರಾಗುವುದನ್ನು ಅಥವಾ ಅತಿಯಾದ ಸಂಶಯಾಸ್ಪದರಾಗುವುದನ್ನು ತಪ್ಪಿಸುವುದು ಹೇಗೆ ಎಂಬುದರ ಕುರಿತು ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡಬೇಕು.

ಎಐ ಉದ್ಯೋಗಗಳನ್ನು ಕಸಿದುಕೊಳ್ಳದೇ ಇದ್ದರೂ ಇದು ಉದ್ಯೋಗಿಗಳ ಮಾನಸಿಕ ಯೋಗಕ್ಷೇಮಕ್ಕೆ ಧಕ್ಕೆಯನ್ನುಂಟು ಮಾಡಬಹುದು. ಅವರಲ್ಲಿ ಕೆಲಸದ ಒತ್ತಡ, ಮಾನಸಿಕ ಸಂದಿಗ್ಧತೆಯನ್ನುಂಟು ಮಾಡಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries