ಕಣ್ಣೂರು: ಸ್ಥಳೀಯಾಡಳಿತ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಣ್ಣೂರಿನಲ್ಲಿ ದಾಳಿಗಳು ಮುಂದುವರೆದಿವೆ. ಪಯ್ಯನ್ನೂರಿನಲ್ಲಿ ಯುಡಿಎಫ್ ಅಭ್ಯರ್ಥಿಯ ಮನೆಯ ಮೇಲೆ ಸ್ಫೋಟಕಗಳನ್ನು ಎಸೆದು ದಾಳಿ ನಡೆಸಲಾಗಿದೆ. ಕಾನೈ ಮೂಲದ ಪಿಕೆ ಸುರೇಶ್ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಪಿಕೆ ಸುರೇಶ್ ನಗರಸಭೆಯ ಒಂಬತ್ತನೇ ವಾರ್ಡ್‍ನಲ್ಲಿ ಸ್ಪರ್ಧಿಸುತ್ತಿದ್ದರು. ನಿನ್ನೆ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಯ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಯುಡಿಎಫ್ ಆರೋಪಿಸಿದೆ. ಈ ಮಧ್ಯೆ, ಮನೆಯಲ್ಲಿ ಸ್ಫೋಟಕಗಳನ್ನು ಎಸೆದ ಸಿಸಿಟಿವಿ ದೃಶ್ಯಾವಳಿ ದಾಖಲಾಗಿದೆ. ಪಯ್ಯನ್ನೂರು ಪೋಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ.
ಸ್ಥಳೀಯಾಡಳಿತ ಚುನಾವಣೆಯ ವಿಜಯೋತ್ಸವದ ಸಂದರ್ಭದಲ್ಲಿ ಪಯ್ಯನ್ನೂರು ನಗರಸಭೆಯ 44 ನೇ ವಾರ್ಡ್ ಚುನಾವಣಾ ಸಮಿತಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಮುಂಗಮ್ ಜುಮಾ ಮಸೀದಿ ಬಳಿಯ ಕಚೇರಿಯನ್ನು ಬೈಕ್‍ಗಳಲ್ಲಿ ಬಂದ ಸುಮಾರು ಹದಿನೈದು ಜನರ ಗುಂಪು ಧ್ವಂಸಗೊಳಿಸಿದೆ. ದಾಳಿಕೋರರು ಸಮಿತಿ ಕಚೇರಿಯ ಕಡೆಗೆ ಹೋಗಿ ದೌರ್ಜನ್ಯ ಎಸಗುತ್ತಿರುವ ದೃಶ್ಯಗಳು ಹೊರಬಿದ್ದಿವೆ. ಘಟನೆಗೆ ಸಂಬಂಧಿಸಿದಂತೆ ಯುಡಿಎಫ್ 44 ನೇ ವಾರ್ಡ್ ಚುನಾವಣಾ ಸಮಿತಿಯು ಪಯ್ಯನ್ನೂರು ಪೋಲೀಸರಿಗೆ ದೂರು ನೀಡಿದೆ. ಪೆÇಲೀಸರು 12 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಮಂತಳಿಯ ಮಹಾತ್ಮ ಸ್ಮಾರಕ ಸಾಂಸ್ಕøತಿಕ ಕೇಂದ್ರದಲ್ಲಿರುವ ಗಾಂಧಿ ಪ್ರತಿಮೆಯ ಮೇಲೂ ಹಿಂಸಾಚಾರ ನಡೆದಿದೆ. ಗಾಂಧಿ ಪ್ರತಿಮೆಯ ಮೂಗು ಮತ್ತು ಕನ್ನಡಕವನ್ನು ಒಡೆದು ಹಾಕಲಾಗಿದೆ. ಪ್ರತಿಮೆಯ ಭಾಗಶಃ ನಾಶವು ಇಂದು ಬೆಳಿಗ್ಗೆ ನಿವಾಸಿಗಳ ಗಮನಕ್ಕೆ ಬಂದಿತು. ಸ್ಥಳೀಯಾಡಳಿತ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ರಾಜ್ಯದಾದ್ಯಂತ ಸಣ್ಣ ಪ್ರಮಾಣದ ಹಿಂಸಾಚಾರದ ವರದಿಗಳು ಬಂದಿವೆ.

