ದೆಹಲಿಯ ಎನ್ಡಿಎಮ್ಸಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದರ ನಂತರ ಒಂದಾಗಿ ಜಾರಿಯಾಗುವ ಚುನಾವಣಾ ನೀತಿ ಸಂಹಿತೆಯಿಂದ ಹೊಸ ಯೋಜನೆಗಳು ಆರಂಭವಾಗದೇ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ ಎಂದರು. ಇದರಿಂದ ಸಮಯ ಮತ್ತು ಸಂಪನ್ಮೂಲಗಳ ಭಾರೀ ನಷ್ಟವಾಗುತ್ತಿದೆ ಎಂದು ಹೇಳಿದರು.
ಈ ಉಪಕ್ರಮವನ್ನು ಜನಾಂದೋಲನವಾಗಿಸಲು ಕರೆ ನೀಡಿದ ಚೌಹಾನ್, 'ವಿಮೆನ್ ಫಾರ್ ಒನ್ ನೇಷನ್, ಒನ್ ಎಲೆಕ್ಷನ್', 'ಡಾಕ್ಟರ್ಗಳು', 'ಪ್ರೊಫೆಸರ್ಗಳು' ಸೇರಿದಂತೆ ವಿವಿಧ ವೃತ್ತಿಪರ ವೇದಿಕೆಗಳನ್ನು ರಚಿಸುವಂತೆ ಮನವಿ ಮಾಡಿದರು. ದೇಶ ಈಗ ವೇಗವಾಗಿ ಮುನ್ನಡೆಯಬೇಕಿದ್ದು, ಎಲ್ಲರೂ ಕರ್ತವ್ಯಭಾವದಿಂದ ಈ ಅಭಿಯಾನದಲ್ಲಿ ತೊಡಗಿದರೆ ಯಾವುದೇ ಗುರಿಯೂ ಅಸಾಧ್ಯವಲ್ಲ ಎಂದರು.

