ಬದಿಯಡ್ಕ: ನೀರ್ಚಾಲು ಕುಂಟಿಕಾನ ಮಾಡತ್ತಡ್ಕ ಶ್ರೀ ದೈವಗಳ ಸೇವಾಸಮಿತಿ ಹಾಗೂ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ನೀರ್ಚಾಲು ಪೇಟೆ, ಕನ್ನೆಪ್ಪಾಡಿ ಪೇಟೆ ದಾರಿಯಾಗಿ ಶ್ರೀ ಹರಿಹರ ಮಂದಿರಕ್ಕೆ ಮೆರವಣಿಗೆ ಸಾಗಿಬಂತು. ಮಾತೆಯರು ಮುತ್ತುಕೊಡೆಗಳೊಂದಿಗೆ ಜೊತೆಗೂಡಿದರೆ ಪುಟಾಣಿ ಮಕ್ಕಳು ಕುಣಿತ ಭಜನೆಯನ್ನು ನಡೆಸಿಕೊಟ್ಟರು. ಶ್ರೀಮಂದಿರದಲ್ಲಿ ಉಗ್ರಾಣಮುಹೂರ್ತ ನೆರವೇರಿಸಲಾಯಿತು. ಬುಧವಾರ ಪೂರ್ವಾಹ್ನ 4ಕ್ಕೆ ಶರಣಂ ವಿಳಿ, 5ಕ್ಕೆ ಗಣಪತಿ ಹೋಮ, 6ಕ್ಕೆ ಗೋವಿಂದ ಭಟ್ ಮಿಂಚಿನಡ್ಕ ಇವರಿಂದ ದೀಪಪ್ರಜ್ವಲನೆ, ನಂತರ ಭಜನೆ ಆರಂಭ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ 12ಕ್ಕೆ ಶರಣಂ ವಿಳಿ, 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ.
ಪಟ್ಲರ ಸಾರಥ್ಯದಲ್ಲಿ ಯಕ್ಷಗಾನ ವೈಭವ :
ಮಧ್ಯಾಹ್ನ 1.30ಕ್ಕೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷಗಾನ ವೈಭವ, ಸಂಜೆ 6ಕ್ಕೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಪಾಲೆಕೊಂಬು ಮೆರವಣಿಗೆ ಆರಂಭವಾಗಿ ರಾತ್ರಿ ಶ್ರೀ ಹರಿಹರಮಂದಿರದ ಅಂಗಣಕ್ಕೆ ಆಗಮನ. ಕುಣಿತ ಭಜನೆ, ಸಿಂಗಾರಿ ಮೇಳ ಜೊತೆಗೂಡಲಿದೆ. ರಾತ್ರಿ 10ಕ್ಕೆ ಮಹಾಪೂಜೆ, 1ಕ್ಕೆ ಅಯ್ಯಪ್ಪನ್ ಪಾಟ್, ಪೊಲಿಪಾಟ್, ರಾತ್ರಿ 2ಕ್ಕೆ ಪಾಲ್ಕಿಂಡಿ ಸೇವೆ, ಅಗ್ನಿಸೇವೆ, ಪೂರ್ವಾಹ್ನ 3ಕ್ಕೆ ತಿರಿ ಉಯಿಚ್ಚಿಲ್, ಅಯ್ಯಪ್ಪ ವಾವರ ಯುದ್ಧ ವೇಣು ಮಾರಾರ್ ಮತ್ತು ಸಂಘ ಬಾಲುಶ್ಶೇರಿ ಕೋಝಿಕ್ಕೋಡು ಇವರಿಂದ ನಡೆಯಲಿದೆ.


