ಮುಳ್ಳೇರಿಯ: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೆ. ಗೀತಾ ಮತ್ತು ನರೇಂದ್ರ ಗೌಡ ಅವರ ಮೇಲಿನ ಸಂಘಟನಾ ಕ್ರಮವನ್ನು ಪಕ್ಷ ಹಿಂತೆಗೆದುಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ.
ಪಂಚಾಯತಿ ಚುನಾವಣೆಯಲ್ಲಿ ಕೆ. ಗೀತಾ ಬೆಳ್ಳೂರು ಪಂಚಾಯತಿಯ 5ನೇ ವಾರ್ಡ್‍ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಚುನಾವಣಾ ಸಮಯದಲ್ಲಿ ಇವರು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೀತಾ ಹಾಗೂ ನರೇಂದ್ರ ಗೌಡ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಬಳಿಕ ಪಕ್ಷದ ಮಟ್ಟದಲ್ಲಿ ನಡೆದ ತನಿಖೆಯಲ್ಲಿ ಇವರು ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಇವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ.

